ಪುತ್ತೂರು : ಭಾರತೀಯ ಜನತಾ ಪಾರ್ಟಿ ಗ್ರಾಮಾಂತರ ಮಂಡಲ ವ್ಯಾಪ್ತಿಯ ನೆಟ್ಟಣಿಗೆ ಮುಡ್ನೂರು ಮಹಾಶಕ್ತಿಕೇಂದ್ರದಲ್ಲಿ ಸದಸ್ಯತಾ ಅಭಿಯಾನ 2024 ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಬಿಜೆಪಿ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್ ವಹಿಸಿದ್ದರು.
ಅಭಿಯಾನವನ್ನು ಗ್ರಾಮಮಟ್ಟದಲ್ಲಿ ಯಶಸ್ವೀಗೊಳಿಸುವಂತೆ ಮಹಾಶಕ್ತೀಕೇಂದ್ರಕ್ಕೆ ಸುಳ್ಯಮಂಡಲದಿಂದ ನಿಯೋಜನೆ ಆಗಿರುವ ಲಕ್ಷ್ಮಿನಾರಾಯಣ್ ಮಾತಾನಾಡಿದರು.
ಸಭೆಯಲ್ಲಿ ಮಹಾಶಕ್ತೀ ಕೇಂದ್ರದ ನೂತನ ಅಧ್ಯಕ್ಷರಾದ ರಾಜೇಶ್ ಪರ್ಪುಂಜ,ಕಾರ್ಯದರ್ಶೀ ಲೋಕೇಶ್ ಚಾಕೋಟೆ,ಜಿಲ್ಲಾ ಸದಸ್ಯತಾ ಅಭಿಯಾನದ ಸಹಸಂಚಾಲಕರಾದ ನಿತೀಶ್ ಶಾಂತಿವನ,ಜಿಲ್ಲಾ ಎಸ್.ಟಿ ಮೋರ್ಚದ ಅಧ್ಯಕ್ಷ ಹರೀಶ್ ಬಿಜತ್ರೆ,ಮಂಡಲ ಕೋಶಾಧಿಕಾರಿ ನಹುಷ ಭಟ್,ಮಂಡಲ ಕಾರ್ಯದರ್ಶಿ ಸೌಮ್ಯ ಬಾಲಸುಬ್ರಮಣ್ಯ,ಮಂಡಲ ಎಸ್.ಸಿ ಮೋರ್ಚ ಅಧ್ಯಕ್ಷರಾದ ಲೋಹಿತ್ ಅಮ್ಚಿನಡ್ಕ, ಪಂಚಾಯತ್ ಅಧ್ಯಕ್ಷರಾದ ತ್ರಿವೇಣಿ ಪಲ್ಲತ್ತಾರು ಮೊದಲಾದವರು ಪಾಲ್ಗೊಂಡಿದ್ದರು.
ಮಹಾಶಕ್ತೀ ಕೇಂದ್ರ ವ್ಯಾಪ್ತಿಯ ಶಕ್ತೀ ಕೇಂದ್ರಗಳಿಗೆ ಅಭಿಯಾನವನ್ನು ಯಶಸ್ವಿಗೊಳಿಸಲು ಸಂಯೋಜಕರನ್ನು ನಿಯುಕ್ತಿಗೊಳಿಸಲಾಯಿತು.