ಪುತ್ತೂರು : “ಪ್ರಾಜೆಕ್ಟ್ ಶಕ್ತಿ ” ಮಹಿಳೆಯರಿಗೆ ಉದ್ಯಮಶೀಲತೆಯ ತರಬೇತಿಯು ಆರ್ಟ್ ಆಫ್ ಲಿವಿಂಗ್ ಸೋಷಿಯಲ್ ಪ್ರಾಜೆಕ್ಟ್ ಹಾಗೂ ಎಚ್. ಇ. ಎಫ್ ಮಹಿಳಾ ಘಟಕ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು ಇವರ ಸಹಕಾರದೊಂದಿಗೆ ಮುಳಿಯ ಜೆಸಿಐ ತರಬೇತಿ ಹಾಲ್ ನಲ್ಲಿ ಉದ್ಘಾಟನೆಗೊಂಡಿದೆ.

ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆಕಾರ್ಯದರ್ಶಿಗಳಾದ ರೂಪಾಲೇಖಾ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.

ಎಚ್.ಇ.ಎಫ್ ಮಹಿಳಾ ಘಟಕ ಪುತ್ತೂರು ಇದರ ಅಧ್ಯಕ್ಷರಾದ ಕೃಷ್ಣವೇಣಿ ಪ್ರಸಾದ್ ಮುಳಿಯ ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿದರು.

ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾದ ರಾಜೇಶ್ವರಿ ಆಚಾರ್ ಶುಭ ಹಾರೈಸಿದರು.

ಈ ತರಬೇತಿಯು ಸೆಪ್ಟೆಂಬರ್ 9 ರಿಂದ 12ರ ತನಕ ನಾಲ್ಕು ದಿನ ನಡೆಯಲಿದೆ.
ಆರ್ಟ್ ಆಫ್ ಲಿವಿಂಗ್ ಮಂಗಳೂರಿನ ತರಬೇತುದಾರರಾದ ಅಮಿತಾ ಸುಧೀರ್ ಕಾರ್ಯಾಗಾರದ ಕುರಿತು ಮಾಹಿತಿ ನೀಡಿದರು.

ಎಚ್. ಇ. ಎಫ್ ಮಹಿಳಾ ಘಟಕ ಪುತ್ತೂರು ಇದರ ಕಾರ್ಯದರ್ಶಿಗಳಾದ ಮಹಾಲಕ್ಷ್ಮಿ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಇದರ ಕಾರ್ಯದರ್ಶಿ ವಚನ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ನಿರ್ವಹಣೆಯನ್ನು ಆರ್ಟ್ ಆಫ್ ಲಿವಿಂಗ್ ಪುತ್ತೂರು ಇದರ ಶಿಕ್ಷಕರಾದ ಶರಾವತಿ ರವಿನಾರಾಯಣ ಮಾಡಿದರು. ಎಚ್. ಇ. ಎಫ್ ಸದಸ್ಯರಾದ ಪ್ರಭಾವತಿ ಪ್ರಾರ್ಥಿಸಿದರು.

ಎಚ್. ಇ. ಎಫ್ ಪುತ್ತೂರು ಘಟಕದ ಸ್ಥಾಪಕ ಸದಸ್ಯರಾದ ರವಿನಾರಾಯಣ. ಎಂ ಹಾಗೂ ಶಿವರಂಜನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದಿನಾಂಕ 12ರಂದು ಆರ್ಟ್ ಆಫ್ ಲಿವಿಂಗ್ ಸೋಷಿಯಲ್ ಪ್ರಾಜೆಕ್ಟ್ ನ ಬೆಂಗಳೂರಿನ ತಂಡ ಪುತ್ತೂರಿಗೆ ಆಗಮಿಸಿ ಒಂದು ದಿನದ ತರಬೇತಿಯನ್ನು ನೀಡಲಿದೆ.
ಆರೋಗ್ಯಕರ ಜೀವನಕ್ಕೆ ಸಹಕಾರಿಯಾದ ಕೆಲವಷ್ಟು ವಸ್ತುಗಳನ್ನು ಈ ಶಿಬಿರಾರ್ಥಿಗಳು ಮುಂದಿನ ದಿನಗಳಲ್ಲಿ ಪುತ್ತೂರಿನ ಜನರಿಗೆ ಒದಗಿಸುವ ಲಘು ಉದ್ಯಮವನ್ನು ಆರಂಭಿಸಲಿದ್ದಾರೆ.

























