ಕಡಬ : ಬೈಕ್ ಸೈಲೆನ್ಸರ್ ಆಲ್ಟ್ರೇಷನ್ ಮಾಡಿ ಶಬ್ದ ಮಾಲಿನ್ಯ ಮಾಡುತ್ತಾ ಬೈಕ್ ಚಲಾಯಿಸುತ್ತಿದ್ದ ಇಬ್ಬರು ಬೈಕ್ ಸವಾರಿಗೆ ದಂಡ ವಿಧಿಸಿ ಸೈಲೆನ್ಸರ್ ನ್ನು ತೆಗೆಸಿದ ಘಟನೆ ನಡೆದಿದೆ.
ಕಡಬ ಠಾಣಾ ವ್ಯಾಪ್ತಿಯ ಬಲ್ಯದಲ್ಲಿ ಯುವಕರಿಬ್ಬರು ಬೈಕ್ ಗಳ ಸೈಲೆನ್ಸರ್ ಆಲ್ಟ್ರೇಷನ್ ಮಾಡಿ ಶಬ್ದ ಮಾಲಿನ್ಯ ಮಾಡುತ್ತಿದ್ದರೆನ್ನಲಾಗಿದೆ.
ಬೈಕ್ ಸವಾರರಾದ ಪ್ರಶಾಂತ್ ಹಾಗೂ ಕುಮಾರ್ ಎಂಬವರ ಬೈಕನ್ನು ನಿಲ್ಲಿಸಿದ ಕಡಬ ಎಸ್ .ಐ. ಅಭಿನಂದನ್ ಹಾಗೂ ಸಿಬ್ಬಂದಿಗಳು ಬೈಕನ್ನು ವಶಪಡಿಸಿಕೊಂಡು ದಂಡ ವಿಧಿಸಿರುವುದು ಅಲ್ಲದೆ ಸೈಲೆನ್ಸರ್ ನ್ನು ತೆಗೆಸಿ ಬೈಕನ್ನು ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.