ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಮೂಲ್ಕಿ, ಬೆಳ್ತಂಗಡಿ ಅಸೆಂಬ್ಲಿಯ ಅಧ್ಯಕ್ಷರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಪುತ್ತೂರಿನ ಎಡ್ವರ್ಡ್, ಮೂಲ್ಕಿಯ ಮನೀಶ್ ರಾಜ್, ಬೆಳ್ತಂಗಡಿಯ ದಿವಿತ್ ದೇವಾಡಿಗರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ದೀರ್ಘಕಾಲದ ನಿಷ್ಕ್ರಿಯತೆ, ಕಾರ್ಯಕ್ಷಮತೆ ಮತ್ತು ಕೊಡುಗೆಗಳ ಸಂಪೂರ್ಣ ಪರಿಶೀಲನೆಯ ನಂತರ ಅಮಾನತುಗೊಳಿಸಲಾಗಿದೆ ಎಂದು ರಾಜ್ಯ ಜನರಲ್ ಸೆಕ್ರೆಟರಿ ಝಕೀರ್ ಹುಸೈನ್ ಆದೇಶದಲ್ಲಿ ತಿಳಿಸಿದ್ದಾರೆ.