ಬೆಂಗಳೂರು : ಹೆತ್ತ ತಾಯಿಯನ್ನೇ ಮಗಳು ಹತ್ಯೆಗೈದ ಘಟನೆ ಬೆಂಗಳೂರಲ್ಲಿ ನಡೆದಿದೆ.
ಜಯಲಕ್ಷ್ಮೀ ಮೃತ ತಾಯಿ. ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ.
ಪವಿತ್ರಾ ಎಂಬಾಕೆ ತನ್ನ ಸ್ನೇಹಿತ ನವನೀಶ್ ಎಂಬುವನ ಜೊತೆ ಸೇರಿ ತಾಯಿಯ ಜೀವವನ್ನೇ ತೆಗೆದು ಹಾಕಿದ್ದಾಳೆ.
ಯಾರು ಈ ಜಯಲಕ್ಷ್ಮೀ?
ಜಯಲಕ್ಷ್ಮೀ ಅವರು ದಿನಸಿ ಅಂಗಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಇವರ ಮಗಳು ಪವಿತ್ರಾ ನವನೀಶ್ ಎಂಬುವನ ಜೊತೆ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಆತನನ್ನು ಮನೆ ಕರೆಸಿಕೊಂಡು ಮಲಗಿದ್ದಳು. ಈ ಬಗ್ಗೆ ತಾಯಿ ಪ್ರಶ್ನೆ ಮಾಡಿದ್ದಕ್ಕೆ ತಾಯಿಯನ್ನ ಕತ್ತು ಹಿಸುಕಿ ಜೀವ ತೆಗೆದಿದ್ದಾರೆ.