ಉತ್ತರ ಪ್ರದೇಶ : ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ವೈರಲ್ ಆಗಬೇಕು ಎಂದು ಮೂಗಿಗೆ ಹತ್ತಿ ತುಂಬಿಸಿ ರಸ್ತೆ ಮಧ್ಯೆ ಮಲಗಿದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತನ್ನದೇ ಸಾವಿನ ನಾಟಕವಾಡಿದ ಯುವಕನನ್ನು ಪೊಲೀಸರು ಕರೆದುಕೊಂಡು ಹೋಗಿ ಕಂಬಿ ಹಿಂದೆ ಕೂರಿಸಿದ್ದಾರೆ.
ನಾಟಕವಾಡಿದ ಯುವಕನನ್ನು ಮುಕೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ಮುಕೇಶ್ ತನ್ನ ಸ್ನೇಹಿತರ ಜೊತೆ ಸೇರಿ ರಸ್ತೆಯಲ್ಲಿ ಹೆಣದಂತೆ ಕತ್ತಿಗೆ ಹೂವಿನ ಹಾರ ಹಾಕಿಕೊಂಡು ಮೈ ಮೇಲೆ ಬಿಳಿವಸ್ತ್ರ ಹೊದ್ದುಕೊಂಡು ಮೂಗಿಗೂ ಹತ್ತಿ ಇಟ್ಟುಕೊಂಡು ನಡುರಸ್ತೆಯಲ್ಲಿ ಮಲಗಿದ್ದರೆ ಆತನ ಸ್ನೇಹಿತರು ಈ ದೃಶ್ಯವನ್ನು ವೀಡಿಯೋ ಮಾಡಿದ್ದಾರೆ.
ಮುಕೇಶ್ ಬಂಧಿತನಾಗಿದ್ದರೂ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.