ವಿಟ್ಲ : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮುಖ್ಯ ಅರ್ಚಕರಾದ ಪ್ರಸಾದ್ ಬನ್ನಿಂತಾಯ ಅವರಿಂದ ವಿಶೇಷ ಪ್ರಾರ್ಥನೆಯು ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಜಯರಾಮ ಬಲ್ಲಾಳ್, ಶ್ರೀಕಂಠ ವರ್ಮ, ರವಿ ವರ್ಮ, ಅರುಣ್ ವರ್ಮ ಸಮ್ಮುಖದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವಿಟ್ಲ ಮಹಾಶಕ್ತಿ ಕೇಂದ್ರ ಬಿಜೆಪಿ ಅಧ್ಯಕ್ಷ ಉದಯಕುಮಾರ್ ಆಲಂಗಾರು, ಪುತ್ತೂರು ಗ್ರಾಮಾಂತರ ಮಂಡಲ ಕಾರ್ಯದರ್ಶಿ ಶ್ರೀಕೃಷ್ಣ ವಿಟ್ಲ, ವಿಟ್ಲ 2 ನೇ ಶಕ್ತಿ ಕೇಂದ್ರ ಪ್ರಮುಖ್ ಶಿಶಿರ್ ಗೌಡ, ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಮಾಜಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಮಾಜಿ ಉಪಾಧ್ಯಕ್ಷೆ ಉಷಾ ಕೃಷ್ಣಪ್ಪ, ವಿಟ್ಲ ವ್ಯವಸಾಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ನರ್ಸಪ್ಪ ಪೂಜಾರಿ, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಮುಖಂಡರಾದ ಪದ್ಮನಾಭ ಕಟ್ಟೆ, ಪಟ್ಟಣ ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ, ಜಯಂತ್ ಸಿ.ಎಚ್, ಅರುಣ್ ವಿಟ್ಲ, ಗೋಪಿ ಕೃಷ್ಣ, ಪಕ್ಷದ ಪ್ರಮುಖರಾದ ರಾಮದಾಸ್ ಶೆಣೈ, ಮೋಹನದಾಸ್ ಉಕ್ಕುಡ, ವೀರಪ್ಪ ಗೌಡ, ತನಿಯಪ್ಪ ಮೂಲ್ಯ, ರಮಾನಾಥ ದೇವಾಡಿಗ, ಅನಂತ ಪ್ರಸಾದ್, ಜಗದೀಶ್ ಪಾಣೆಮಜಲು, ಕೃಷ್ಣಪ್ಪ ಗಾಣಿಗ, ರವಿಶಂಕರ್ ವಿಟ್ಲ, ಜಗನ್ನಾಥ ಶೆಟ್ಟಿ, ಭೋಜರಾಜ ಮಣಿಯಾಣಿ, ಕೃಷ್ಣ ಮುದೂರು, ವಿಘ್ನೇಶ್ ಶೆಟ್ಟಿಗಾರ್, ವಿಶ್ವೇಶ್ವರ ಆಲಂಗಾರು, ಅಭಿಷೇಕ್ ಗಾಣಿಗ, ರಾಜೇಶ್ ನಾಯ್ಕ್ ಗಾಳಿಹಿತ್ಲು, ನಾಗೇಶ್ ಆಚಾರ್ಯ ಉಪಸ್ಥಿತರಿದ್ದರು.



























