ವಿಟ್ಲ : ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಮಿತಿ (ರಿ) ಕಾನತ್ತಡ್ಕ ವಿಟ್ಲ ಇದರ ವತಿಯಿಂದ ವಿಶ್ವಕರ್ಮ ಪೂಜೆಯು ಕಾನತ್ತಡ್ಕದ ವಿಶ್ವಕರ್ಮ ಸಮುದಾಯ ಭವನದಲ್ಲಿ ಜರಗಿತು.
ಸಭಾ ಕಾರ್ಯಕ್ರಮದಲ್ಲಿ ಸಂತೋಷ್ ಪುರೋಹಿತ್ ದಿಡುಪೆ ಇವರು ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚಂದ್ರಶೇಖರ ಆಚಾರ್ಯ ಎರುಂಬು ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಸುಂದರ ಆಚಾರ್ಯ ನೆಗಳಗುಳಿ ವಿಟ್ಲ, ಕೂಡುವಳಿಕೆ ಮೊಕ್ತೇಸರ ಜಗನ್ನಾಥ ಆಚಾರ್ಯ ಕೂಟೇಲು, ಉಪಾಧ್ಯಕ್ಷ ಶ್ರೀಧರ ಆಚಾರ್ಯ ಮಂಡ್ಯೂರು, ಜೊತೆ ಕಾರ್ಯದರ್ಶಿ ಹರೀಶ್ ಆಚಾರ್ಯ ಗುಂಡೂರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಜಯಪ್ರಕಾಶ್ ಆಚಾರ್ಯ ಎರುಂಬು ಸ್ವಾಗತಿಸಿದರು. ಹರಿಪ್ರಸಾದ್ ಆಚಾರ್ಯ ಕೇಪುಕಟ್ಟೆ ಪ್ರಾರ್ಥಿಸಿದರು. ಕೋಶಾಧಿಕಾರಿ ಪರಮೇಶ್ವರ ಆಚಾರ್ಯ ಮಂಕುಡೆನೆಡ್ಯಾಳ ಸಂಯೋಜಿಸಿದರು.