ಬೆಂಗಳೂರು : ತಿಂಗಳುಗಳ ಹಿಂದೆ ಈ ಪಟ್ಟಣಗೆರೆ ಶೆಡ್ ಸಿಕ್ಕಾಪಟ್ಟೆ ಟ್ರೆಂಡಿಂಗ್ನಲ್ಲಿತ್ತು. ಅದರಲ್ಲೂ ಈ “ಶೆಡ್ಡಿಗ್ ಬಾ” ಎಂಬ ಪದ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರ ಬಗ್ಗೆ ಹೆಚ್ಚಿನವರು ರೀಲ್ಸ್ ವಿಡಿಯೋ ಮಾಡಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದರು. ಇದೀಗ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಬಡ್ಡಿ ದಂಧೆಗೆ ಸಂಬಂಧಿಸಿದ ಕೋರ್ಟ್ ವಿಚಾರಣೆಯ ವೇಳೆ ಬಾಡಿಗೆ ಆಟೋ ಓಡಿಸುವವರ ಸಮಸ್ಯೆಯ ಬಗ್ಗೆ ವಿವರಣೆ ಕೊಡುವ ಸಂದರ್ಭದಲ್ಲಿ ʼಶೆಡ್ಡಿಗ್ ಬಾʼ ಎಂಬ ಪದವನ್ನು ಬಳಸಿದ್ದು, ಈ ಕುರಿತ ವೀಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಕುರಿತ ವಿಡಿಯೋವೊಂದನ್ನು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಬಾಡಿಗೆ ಆಟೋ ಓಡಿಸುವವರ ಕಷ್ಟಗಳನ್ನು ವಿವರಿಸುತ್ತಾ 250 ಕೊಡಿ ಇಲ್ಲಾಂದ್ರೆ ಶೆಡ್ಡಿಗ್ ಬಾ ಎಂದು ಹೇಳುವ ಹಾಸ್ಯಮಯ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.