ನವದೆಹಲಿ : ಸುಪ್ರೀಂ ಕೋರ್ಟ್‌ನ ಯೂಟ್ಯೂಬ್ ಚಾನೆಲ್ ಹ್ಯಾಕ್ ಆಗಿದೆ. ಯುಎಸ್ ಮೂಲದ ಕಂಪನಿ ರಿಪ್ಪಲ್ ಲ್ಯಾಬ್ಸ್ ಅಭಿವೃದ್ಧಿಪಡಿಸಿದ ಕ್ರಿಪ್ಟೋಕರೆನ್ಸಿಯನ್ನು ಪ್ರಚಾರ ಮಾಡುವ ವೀಡಿಯೋಗಳು ಚಾನೆಲ್‌ನಲ್ಲಿ ಬರುತ್ತಿವೆ.
‘ಬ್ರ್ಯಾಡ್ ಗಾರ್ಲಿಂಗ್‌ಹೌಸ್: ರಿಪ್ಲೆ ರೆಸ್ಪೋಂಡ್ ಟು ದಿ SEC’s 2 ಮಿಲಿಯನ್ ಡಾಲರ್ ಫೈನ್! XRP PRICE PREDICTION’ ಶೀರ್ಷಿಕೆಯೊಂದಿಗೆ ಖಾಲಿ ವೀಡಿಯೋ ಪ್ರಸ್ತುತ ಹ್ಯಾಕ್ ಮಾಡಿದ ಚಾನಲ್‌ನಲ್ಲಿ ಲೈವ್ ಆಗಿದೆ.
ಸಾಂವಿಧಾನಿಕ ಪೀಠಗಳ ಮುಂದೆ ಪಟ್ಟಿ ಮಾಡಲಾದ ಪ್ರಕರಣಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ವಿಷಯಗಳ ನೇರ ವಿಚಾರಣೆಗಳನ್ನು ಸ್ಟ್ರೀಮ್ ಮಾಡಲು ಸುಪ್ರೀಂ ಕೋರ್ಟ್ ಯೂಟ್ಯೂಬ್ ಅನ್ನು ಬಳಸುತ್ತಿದೆ.