ಸುಳ್ಯ : ಹಾಸ್ಟೆಲ್ ನಲ್ಲಿ ಉಳಿದು ಶಾಲೆಗೆ ಹೋಗುತ್ತಿದ್ದ ಬಾಲಕನೋರ್ವನ ಮರ್ಮಾಂಗವನ್ನು ಸಹಪಾಠಿ ವಿದ್ಯಾರ್ಥಿಗಳು ಹಿಡಿದೆಳೆದ ಪರಿಣಾಮವಾಗಿ ಮರ್ಮಾಂಗಕ್ಕೆ ಹಾನಿಯಾಗಿರುವ ಘಟನೆ ಸಂಪಾಜೆಯಲ್ಲಿ ನಡೆದಿದೆ.
ಸಂಪಾಜೆಯ ಆಲಡ್ಕ ನಿವಾಸಿಯಾಗಿರುವ 12 ವರ್ಷದ ಬಾಲಕ ಕಳೆದ ಕೆಲ ಸಮಯಗಳಿಂದ ಕೊಡಗು ಸಂಪಾಜೆಯ ಹಾಸ್ಟೆಲ್ ನಲ್ಲಿದ್ದು ಶಾಲೆಗೆ ಹೋಗುತ್ತಿದ್ದ.
ಸೆ.14ರಂದು ರಾತ್ರಿ ಹಾಸ್ಟೆಲ್ ನಲ್ಲಿ ಇಬ್ಬರು ಸಹಪಾಠಿ ವಿದ್ಯಾರ್ಥಿಗಳು ಬಾಲಕನ ಮರ್ಮಾಂಗವನ್ನು ಹಿಡಿದೆಳೆದಿದ್ದರು. ಬಳಿಕ ಬಾಲಕ ಮೂತ್ರ ವಿಸರ್ಜನೆ ಮಾಡುವ ವೇಳೆ ನೋವಾಗುತ್ತದೆಂದು ಮನೆಗೆ ಬಂದಿದ್ದನೆನ್ನಲಾಗಿದೆ.
ಯಾರ ಬಳಿಯೂ ವಿಷಯ ತಿಳಿಸಿರದಿದ್ದ ಬಾಲಕ ಮರ್ಮಾಂಗಕ್ಕೆ ಹಾನಿಯಾದ ಹಿನ್ನಲೆ ತಾಯಿಯೊಡನೆ ವಿಷಯ ತಿಳಿಸಿದನೆನ್ನಲಾಗಿದೆ. ಬಳಿಕ ಮನೆಯವರು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಮಂಗಳೂರಿನ ವೆನ್ಲಾಕ್ ಆಸತ್ರೆಗೆ ದಾಖಲಿಸಿದ್ದು, ಅಲ್ಲಿ ಬಾಲಕನಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದು ಬಂದಿದೆ.