ಹಿಮಾಚಲ ಪ್ರದೇಶ : ಮದುವೆಗೆ ಸಂಬಂಧಿಸಿದ ಸಂಪ್ರದಾಯಗಳು ಭಾರತದ ಎಲ್ಲಾ ರಾಜ್ಯಗಳಲ್ಲಿ ಸಂಪೂರ್ಣವಾಗಿ ವಿಭಿನ್ನವಾಗಿವೆ. ಕೆಲವೆಡೆ ಮದುವೆಯ ನಂತರ ಬಟ್ಟೆ ಹರಿದು ಹಾಕುವ ಪದ್ಧತಿ ಇದ್ದರೆ, ಇನ್ನು ಕೆಲವೆಡೆ ವಧುವರರನ್ನು ಕೋಣೆಯಲ್ಲಿ ಕೂಡಿ ಹಾಕುವ ಪದ್ಧತಿ ಇದೆ.
ಹಿಮಾಚಲ ಪ್ರದೇಶದ ಮಣಿಕರ್ಣ ಕಣಿವೆಯ ಪಿನಿ ಗ್ರಾಮದ ಜನರು ಮದುವೆಗೆ ಸಂಬಂಧಿಸಿದ ವಿಶಿಷ್ಟ ಸಂಪ್ರದಾಯವನ್ನು ಅನುಸರಿಸುತ್ತಾರೆ. ಇಲ್ಲಿ ನವ ವಧು ಮದುವೆಯಾದ ಮೊದಲ ವಾರದಲ್ಲಿ ಯಾವುದೇ ಬಟ್ಟೆಯನ್ನು ಧರಿಸುವಂತಿಲ್ಲ. ವಧು ಈ ಅವಧಿಯಲ್ಲಿ ಉಣ್ಣೆಯಿಂದ ಮಾಡಿದ ಬೆಲ್ಟ್ಗಳನ್ನು ಮಾತ್ರ ಧರಿಸಬಹುದು.
ಇದಲ್ಲದೇ ವರ ಕೂಡ ಕೆಲವು ನಿಯಮಗಳನ್ನು ಪಾಲಿಸಬೇಕು. ಮಹಿಳೆಯರು 5 ದಿನಗಳವರೆಗೆ ಯಾವುದೇ ಬಟ್ಟೆಯನ್ನು ಧರಿಸದೇ ಇರುವುದು ಒಂದೆಡೆಯಾದರೆ ಈ ಅವಧಿಯಲ್ಲಿ ಪುರುಷರು ಮದ್ಯಪಾನ ಮಾಡುವಂತಿಲ್ಲ. ವಧು-ವರರು ಈ ವಿಧಿಗಳನ್ನು ಅನುಸರಿಸಿದರೆ ಅವರಿಗೆ ದಾಂಪತ್ಯದಲ್ಲಿ ಅದೃಷ್ಟ ಬರುತ್ತದೆ ಎಂದು ನಂಬಲಾಗಿದೆ.