ಮಂಗಳೂರು : ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬೋಳೂರಿನ ಹಿಂದೂ ರುದ್ರಭೂಮಿಗೆ ಭೇಟಿ ನೀಡಿದರು.
ಸ್ಥಳೀಯ ಕಾರ್ಪೊರೇಟರ್ ಜೊತೆ ಬೋಳೂರಿನ ಹಿಂದೂ ರುದ್ರಭೂಮಿಗೆ ಭೇಟಿ ನೀಡಿ ಅಲ್ಲಿನ ಚಿತಾಗಾರದ ಸಿಬ್ಬಂದಿಗಳ ಜೊತೆ ಮಾತನಾಡಿದರು.
ಚಿತಾಗಾರಕ್ಕೆ ಆಗಮಿಸುವ ಮಂಗಳೂರು ಮಹಾನಗರದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದು, ಅವುಗಳನ್ನು ಮುಂದಿನ ದಿನಗಳಲ್ಲಿ ಬಗೆಹರಿಸುವ ಬಗ್ಗೆ ಚರ್ಚಿಸಿದರು.