ಪುತ್ತೂರು : ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಫೆಸೇರ ಫ್ಯಾಷನ್ ಅಸೋಸಿಯೇಷನ್ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ, “ಸುಸ್ಥಿರತೆ – ಫ್ಯಾಷನ್ನಭವಿಷ್ಯ” ಎಂಬ ಶೀರ್ಷಿಕೆಯಡಿ ಫ್ಯಾಷನ್ ಡಿಶೈನ್ ವಿಭಾಗದಿಂದ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಪ್ರತಿಷ್ಠಿತ “Li’l ohana” ಸಂಸ್ಥೆಯ ಸ್ಥಾಪಕರು ಹಾಗೂ ಸಹಪ್ರಾಧ್ಯಾಪಕಿ ಆದ ಅಲ್ಕಾಮನೋಜ್ ಭಾಗವಹಿಸಿದರು. ತಮ್ಮದೇ ಬ್ರ್ಯಾಂಡ್ “ಓಹನಾ” ದ ಬಗ್ಗೆ ವಿಸೃತ ಮಾಹಿತಿ ನೀಡಿ , ಪರಿಸರ ಸ್ನೇಹಿ ಬಟ್ಟೆಬರೆಗಳ ಬಳಕೆ ಮತ್ತು ಉತ್ಪಾದನೆಯನ್ನು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ನಾವು ಪ್ರೋತ್ಸಾಹಿಸಬೇಕು. ನಾವು ಬಳಸುವ ವೈವಿಧ್ಯಮಯ ಉಡುಪುಗಳಲ್ಲಿ ಕೆಲವೊಂದು ಉಪಯೋಗ ಶೂನ್ಯವಾದ ಮೇಲೆ ನಮ್ಮ ಪರಿಸರದಲ್ಲಿ ವಿಲೇವಾರಿ ಮಾಡುತ್ತೇವೆ ಆದರೆ ಅದು ಮಣ್ಣಿನೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆಯಲ್ಲಿ ಪರಿಸರಕ್ಕೆ ಹಾನಿಯನ್ನು ಉಂಟುಮಾಡುತ್ತದೆ. ವಿವಿಧ ಕಾಲಘಟ್ಟದಲ್ಲಿ ಬಟ್ಟೆಬರೆಗಳ ಉತ್ಪಾದನಾ ರೀತಿ ಅವುಗಳ ಬಳಕೆ ಮತ್ತು ಉಪಯೋಗ ಶೂನ್ಯವಸ್ತ್ರಗಳ( ತ್ಯಾಜ್ಯಗಳ) ಅಸಮರ್ಪಕ ವಿಲೇವಾರಿಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ, ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಲ್ಲಿ ಸಮರ್ಪಕವಾದ ಬಳಕೆ ಮತ್ತು
ನಿರ್ವಹಣೆಯ ಮಹತ್ವದ ಬಗ್ಗೆ ತಿಳಿಸಿದರು.
ನೂತನ ಬ್ರ್ಯಾಂಡ್ ಅಭಿವೃದ್ಧಿ, ಜನರ ಅಭಿರುಚಿ ಮತ್ತು ಆಯ್ಕೆಗೆ ಅನುಗುಣವಾಗಿ ನವೀನ ರೀತಿಯ ವಸ್ತ್ರವಿನ್ಯಾಸದ ವ್ಯಾಪ್ತಿ ಮತ್ತು ಉದ್ಯೋಗದ ಸೃಷ್ಟಿಯ ಬಗ್ಗೆ ಮನದಟ್ಟು ಮಾಡಿದರು.
ಕಾರ್ಯಕ್ರಮದಲ್ಲಿ ತೃತೀಯ ಪದವಿ ಫ್ಯಾಷನ್ಡಿಸೈನ್ವಿಭಾಗದ ವಿದ್ಯಾರ್ಥಿನಿಯರಾದ ದೀಕ್ಷಾ ಸ್ವಾಗತಿಸಿ, ಧನ್ಯಶ್ರೀ ಸಂಪನ್ಮೂಲ ವ್ಯಕ್ತಿಯ ಕಿರುಪರಿಚಯ ಮಾಡಿದರು. ಸುಮಾರು 120 ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಫ್ಯಾಷನ್ಡಿಸೈನ್ವಿಭಾಗದ ಮುಖ್ಯಸ್ಥೆಯಾದ ಅನುಷಾ ಪ್ರವೀಣ್ ಕುಮಾರ್, ಫೆಸೇರ ಅಸೋಸಿಯೇಷನ್ಸಂಯೋಜಕ ಸಹಪ್ರಾಧ್ಯಾಪಕರಾದ ಕಿಶನ್ಎನ್. ರಾವ್, ಸಹ ಪ್ರಾಧ್ಯಾಪಕಿಯರಾದ ಜನೀತ, ಅನನ್ಯ ಭಟ್ ಧನ್ಯಶ್ರೀ ಉಪಸ್ಥಿತರಿದ್ದರು.