ಕಲಬುರಗಿ : ಅಣ್ಣನ ಪ್ರೀತಿಗೆ ಒಡಹುಟ್ಟಿದ ತಮ್ಮ ಬಲಿಯಾದ ಘಟನೆ ಕಲಬುರಗಿ ತಾಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಮಿತ್ ಮಲ್ಲಾಬಾದ್ (18) ಕೊಲೆಯಾದ ವಿದ್ಯಾರ್ಥಿ.
ಸುಮಿತ್ ಮುಂಬೈನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಕಳೆದ ನಾಲ್ಕೈದು ದಿನಗಳ ಹಿಂದೆ ತಾಯಿಯೊಂದಿಗೆ ಕಲಬುರಗಿಗೆ ಆಗಮಿಸಿದ್ದನು.
ಸುಮಿತ್ ಕಲಬುರಗಿಯ ನಾಗನಹಳ್ಳಿ ಗ್ರಾಮದಲ್ಲಿ ಕುಟುಂಬಸ್ಥರೊಂದಿಗೆ ಇದ್ದನು. ಆತನ ಸಹೋದರ ಸಚಿನ್ ನಾಗನಹಳ್ಳಿ ಗ್ರಾಮದ ಯುವತಿಯನ್ನು ಪ್ರೀತಿ ಮಾಡುತ್ತಿದ್ದನು. ಹೀಗಾಗಿ ಮದುವೆ ವಿಚಾರಕ್ಕೆ ಎರಡು ಕುಟುಂಬಗಳ ಮಧ್ಯೆ ಗಲಾಟೆಯಾಗಿದೆ.
ಸಚಿನ್ ಮೇಲಿನ ಕೋಪಕ್ಕೆ ಯುವತಿಯ ಕುಟುಂಬಸ್ಥರು ಸುಮಿತ್ ಜೊತೆ ಗಲಾಟೆ ಮಾಡಿದ್ದಾರೆ. ಗಲಾಟೆಯಲ್ಲಿ ಸುಮಿತ್ ತಾಯಿ ಮೇಲೆ ನಾಲ್ಕೈದು ಜನರ ಗುಂಪು ಹಲ್ಲೆ ಮಾಡಿದ್ದಾರೆ. ತಾಯಿಯನ್ನ ದೂರ ಇರುವಂತೆ ಹೇಳಿದ ತಕ್ಷಣ ಸುಮಿತ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.