ಬೆಂಗಳೂರು : ಓಣಂ ಹಬ್ಬದಲ್ಲಿ ಪೂಕಳಂ ಪ್ರಮುಖ ಆಕರ್ಷಣೆ ಅಂತಾನೇ ಹೇಳಬಹುದು. ಪೂಕಳಂ ಎಂದ್ರೆ ಹೂವಿನ ರಂಗೋಲಿ. ಈ ಸುಗ್ಗಿ ಹಬ್ಬದ ಸಮಯದಲ್ಲಿ ಸಂಪ್ರದಾಯದ ಭಾಗವಾಗಿ ಕೇರಳಿಗರು ತಮ್ಮ ಮನೆಗಳಲ್ಲಿ ಸುಂದರವಾದ ಹೂವಿನ ರಂಗೋಲಿಯನ್ನು ಬಿಡಿಸುತ್ತಾರೆ. ಅದೇ ರೀತಿ ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಕೇರಳ ಮೂಲದ ಕೆಲವು ಮಕ್ಕಳು ತಮ್ಮ ಹಬ್ಬದ ಆಚರಣೆಯ ಸಲುವಾಗಿ ಸುಂದರವಾದ ಹೂವಿನ ರಂಗೋಲಿಯನ್ನು ಬಿಡಿಸಿದ್ದು, ತನ್ನ ಅನುಮತಿಯಿಲ್ಲದೆ ಹೂವಿನ ರಂಗೋಲಿ ಹಾಕಿದರೆಂದು ಅದನ್ನು ಕಾಲಿನಿಂದ ಒದ್ದು ಮಹಿಳೆಯೊಬ್ಬರು ಕಿರಿಕ್ ಮಾಡಿದ್ದಾರೆ. ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಹಿಳೆಯ ದುರ್ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಥಣಿಸಂದ್ರದ ಮೊನಾರ್ಕ್ ಸೆರಿನಿಟಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ತನ್ನ ಅನುಮತಿಯಿಲ್ಲದೆ ಹೂವಿನ ರಂಗೋಲಿ ಬಿಡಿಸಿದರೆಂದು ರೊಚ್ಚಿಗೆದ್ದ ಮಹಿಳೆ ಮಕ್ಕಳು ಸುಂದರವಾಗಿ ಬಿಡಿಸಿದ ರಂಗೋಲಿಯನ್ನು ಕಾಲಲ್ಲಿ ಒದ್ದು ಕಿರಿಕ್ ಮಾಡಿದ್ದಾರೆ.
ಓಣಂ ಹಬ್ಬದ ಸಲುವಾಗಿ ಕೇರಳ ಮೂಲದ ಒಂದಷ್ಟು ಮಕ್ಕಳು ತಮ್ಮ ಅಪಾರ್ಟ್‌ಮೆಂಟ್ ಎದುರಲ್ಲಿ ಹೂವಿನ ರಂಗೋಲಿಯನ್ನು ಬಿಡಿಸಿದ್ದು, ಅದು ಹೇಗೆ ನನ್ನ ಅನುಮಿತಿಲ್ಲದೆ ರಂಗೋಲಿ ಬಿಡಿಸಿದ್ರಿ ಎಂದು ಸಿಮಿ ನಾಯರ್ ಎಂಬ ಮಹಿಳೆ ರಂಗೋಲಿ ನಾಶ ಮಾಡಿ ದುರ್ವರ್ತನೆ ತೋರಿದ್ದಾರೆ.
ವೀಡಿಯೋ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಇದು ನಿಜಕ್ಕೂ ನಾಚಿಕೆಗೇಡಿನ ನಡವಳಿಕೆಯಾಗಿದೆ” ಎಂಬ ಶಿರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ವೀಡಿಯೋದಲ್ಲಿ ಮಹಿಳೆಯೊಬ್ಬರು ಮಕ್ಕಳು ಬಿಡಿಸಿದ ಪೂಕಳಂ ಮೇಲೆ ನಿಂತಿರುವ ದೃಶ್ಯವನ್ನು ಕಾಣಬಹುದು. ಅದು ಹೇಗೆ ನನ್ನ ಅನುಮತಿಯಿಲ್ಲದೆ ಇಲ್ಲಿ ರಂಗೋಲಿ ಬಿಡಿಸಿದ್ರಿ, ಏನ್ ಮಾಡ್ಬೇಕು ಎಂಬುದು ನನಗೆ ಗೊತ್ತು ಎಂದು ರಂಗೋಲಿಯನ್ನು ಕಾಲಲ್ಲಿ ಒದ್ದು, ಚೆಲ್ಲಾಪಿಲ್ಲಿ ಮಾಡಿ ದುರ್ವರ್ತನೆಯನ್ನು ತೋರಿದ್ದಾರೆ.