ಮಂಗಳೂರು : ಆಂಬ್ಯುಲೆನ್ಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದ ಘಟನೆ ಮಂಗಳೂರು ಹೊರ ವಲಯದ ಪಡೀಲ್ ನಲ್ಲಿ ನಡೆದಿದೆ.
ಪುತ್ತೂರಿನ ಖಾಸಗಿ ಆಸ್ಪತ್ರೆಯಿಂದ ಮಂಗಳೂರಿಗೆ ರೋಗಿಯನ್ನು ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ಪಡೀಲ್ ಸಮೀಪ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ.
ಮಳೆ ಬಂದ ಹಿನ್ನಲೆ ರಸ್ತೆಯಲ್ಲಿದ್ದ ಕೆಸರು ನೀರು ಕಾರಿನ ಮುಂಭಾಗದ ಗ್ಲಾಸ್ ಗೆ ಎರಚಿದ ಕಾರಣ ರಸ್ತೆ ಕಾಣದೆ ಆಂಬ್ಯುಲೆನ್ಸ್ ಪಡೀಲ್ ಸಮೀಪ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದು, ರೋಗಿ ಹಳೆನೆರೇಂಕಿ ನಿವಾಸಿ ದಾಸಪ್ಪ ರೈ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

























