ಬೆಳ್ತಂಗಡಿ : ಹಳೆಕೋಟೆ ಎಂಬಲ್ಲಿ ಮನೆಯೊಂದರಿಂದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 5 ಲಕ್ಷ ರೂ. ನಗದು ಕಳವುಗೈದ ಘಟನೆ ನಡೆದಿದೆ.
ಹಳೇಕೋಟೆ ನಿವಾಸಿ ಪ್ರಸನ್ನ ಕುಮಾರ್ ಎಂಬವರ ಮನೆಯಿಂದ ಈ ಕಳ್ಳತನ ನಡೆಸಲಾಗಿದೆ. ಸೆ.13ರಿಂದ ಸೆ.24ರ ಬೆಳಗ್ಗಿನ ಜಾವದ ಅವಧಿಯಲ್ಲಿ ಕಳ್ಳರು ಕೃತ್ಯವೆಸಗಿದ್ದಾರೆ.
ಮನೆಯೊಳಗೆ ಪ್ರವೇಶಿಸಿದ ಕಳ್ಳರು ಮನೆಯ ಹಾಲ್ ನ ಟಿ.ವಿ ಸ್ಟಾಂಡ್ ನಲ್ಲಿಟ್ಟಿದ್ದ 5,05,000 ಮೌಲ್ಯದ ಚಿನ್ನಾಭರಣಗಳು ಹಾಗೂ 500000/- ನಗದು ಹಣವನ್ನು ಕಳ್ಳರು ಕಳವು ಮಾಡಿದ್ದಾರೆ.
ಪ್ರಸನ್ನ ಕುಮಾರ್ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾದ ಕ್ರಮಾಂಕ: 82/2024 ಕಲಂ: 305 BNS ರಂತೆ ಪ್ರಕರಣ ದಾಖಲಾಗಿದೆ.


























