ಪುತ್ತೂರು : ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಂಘ ಸಂಸ್ಥೆ, ಗುಂಪು, ಪಂಗಡಗಳ, ವಿರುದ್ಧ ತಕರಾರು ಎತ್ತಿ ದ್ವೇಷ ಹರಡಿ ನಿರಂತರ ತೊಡಕುಂಟು ಮಾಡುತ್ತಿರುವುದಲ್ಲದೆ ಬೆಳ್ಳಾರೆ ಮಸೀದಿಯಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿರುವುದಾಗಿ ಆರೋಪಿಸಿ ಬೆಳ್ಳಾರೆ ಮಸೀದಿಯ ಆಡಳಿತ ಮಂಡಳಿಯವರು ನಿಂತಿಕಲ್ ಸಮೀಪದ ಸಮಹಾದಿಯ ಇಬ್ರಾಹಿಂ ಖಲೀಲ್ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.
ಇಬ್ರಾಹಿಂ ಖಲೀಲ್ ಹಲವಾರು ಸುಳ್ಳು ದ್ವೇಷ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಿದ್ದು, ಪಂಗಡ ಮತ್ತೆ ಜಾತಿಗಳ ನಡುವೆ ವೈಷಮ್ಯ ವೈರಾಗ್ಯ, ಕೋಮು ಪ್ರಚೋದನೆ ಬರುವ ರೀತಿಯಲ್ಲಿ ಬರೆದಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.