ಬಂಟ್ವಾಳ : ಶ್ರೀ ಶಾರದಾ ಯುವ ವೇದಿಕೆ ಸೇವಾ ಟ್ರಸ್ಟ್ ರಿ. ಮಾಣಿ ವತಿಯಿಂದ ನವರಾತ್ರಿ ಮಹೋತ್ಸವದ ಅಂಗವಾಗಿ ‘ದಸರಾ ಕ್ರೀಡಾಕೂಟ’ ಸೆ.29 (ನಾಳೆ) ರಂದು ಮಾಣಿ ಗಾಂಧಿ ಮೈದಾನದಲ್ಲಿ ನಡೆಯಲಿದೆ.
ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರಾದ ಸಚಿನ್ ರೈ ಮಾಣಿಗುತ್ತು ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಬೆಳ್ಳಿಗೆ ಮಕ್ಕಳ ಹಾಗೂ ಜೂನಿಯರ್ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಹಿರಿಯರ ಕಬಡ್ಡಿ ಪಂದ್ಯಾಟ ಆರಂಭವಾಗಲಿದೆ. 2 ಗಂಟೆಯಿಂದ ಮಹಿಳೆಯರಿಗೆ ಆಟೋಟ ಸ್ಪರ್ಧೆಗಳು ನಡೆಯಲಿದೆ.
ಸಂಜೆ 4 ಗಂಟೆಗೆ ಹಗ್ಗಜಗ್ಗಾಟ ನಡೆಯಲಿದೆ.
ಸಂಜೆ 5 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಮುಖಂಡರಾದ ಸಂದೇಶ್ ಶೆಟ್ಟಿ ಅರೆಬೆಟ್ಟು ಇವರು ವಹಿಸಲಿದ್ದಾರೆ.
ಅತಿಥಿಗಳಾಗಿ ಹಿಂದೂ ಮುಖಂಡರಾದ ರಾಜಾರಾಮ್, ಕಾಡೂರು-ಪೆರಾಜೆ, ಮಹಾಗಣಪತಿ ಕನ್ಸ್ಟ್ರಕ್ಷನ್ & ಡೆವಲಪರ್ಸ್ ವಿಟ್ಲ, ಪುತ್ತೂರು ಹಾಗೂ ವಿಟ್ಲ ಸಮರ್ಪಣಾ ಅಧ್ಯಕ್ಷರಾದ ಯಶವಂತ ಪೂಜಾರಿ ಆಗಮಿಸಲಿದ್ದಾರೆ.
ಹಿರಿಯರ ಕಬಡ್ಡಿ ಪಂದ್ಯಾಟದ ಬಹುಮಾನಗಳು : ಪ್ರಥಮ – 4001, ದ್ವಿತೀಯ – 3001.
ಹಗ್ಗಜಗ್ಗಾಟ ಬಹುಮಾನಗಳು : ಪ್ರಥಮ – 2501, ದ್ವಿತೀಯ – 2001
9ನೇ ತರಗತಿಯಿಂದ ಪದವಿವರೆಗೆ ಕಬಡ್ಡಿ ಪಂದ್ಯಾಟ ಬಹುಮಾನಗಳು : ಪ್ರಥಮ -1501, ದ್ವಿತೀಯ -1001.
1ನೇ ತರಗತಿಯಿಂದ 8ನೇ ತರಗತಿಯವರೆಗಿನ ಕಬಡ್ಡಿ ಪಂದ್ಯಾಟ ಬಹುಮಾನಗಳು : ಪ್ರಥಮ -701, ದ್ವಿತೀಯ -301, ನಗದು, ವೈಯಕ್ತಿಕ ನಗದು ಬಹುಮಾನಗಳು
ಉತ್ತಮ ರೈಡರ್, ಉತ್ತಮ ಕ್ಯಾಚರ್ ಮತ್ತು ಸವ್ಯಸಾಚಿಗೆ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು.
ಜೂನಿಯರ್ ಕಬಡ್ಡಿ ಪಂದ್ಯಾಟ, ಹಿರಿಯರ ಕಬಡ್ಡಿ ಪಂದ್ಯಾಟ ಹಾಗೂ ಮಹಿಳೆಯರ ಎಲ್ಲಾ ಸ್ಪರ್ಧೆಗಳಿಗೆ ತಂಡವನ್ನು ಸ್ಥಳದಲ್ಲೇ ರಚನೆ ಮಾಡಲಾಗುವುದು.
ಹಗ್ಗಜಗ್ಗಾಟ ಸ್ಪರ್ಧೆಗೆ ಏಳು ಜನರ ತಂಡವನ್ನು ರಚಿಸಿ ತರಬೇಕು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.