ಪುತ್ತೂರು : ರಾಜಕೀಯ ಪಕ್ಷಗಳಲ್ಲಿ ಸಕ್ರಿಯರಾಗಿದ್ದ ಮತ್ತು ಸೋಶಿಯಲ್ ಮೀಡಿಯಾ ಬರಹಗಾರ ಬಪ್ಪಳಿಗೆ ನಿವಾಸಿ ಅದ್ದು ಪಡೀಲ್ ಅವರು ಮಸೀದಿಯೊಳಗಡೆ ವೀಡಿಯೋ ಕಾಲ್ ಮೂಲಕ ಮಹಿಳೆಯೊಂದಿಗೆ ಮಾತನಾಡುತ್ತಾ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆಯಾಗುತ್ತಿದೆ.
ವೀಡಿಯೋ ಕಾಲ್ನಲ್ಲಿ ಮಹಿಳೆಯೊಬ್ಬರು ನಗ್ನವಾಗಿರುವ ಮತ್ತು ನಗ್ನ ವೀಡಿಯೋ ನೋಡಿ ವ್ಯಕ್ತಿಯೊಬ್ಬರು ಸೂಪರ್ ಎಂದು ಹೇಳುವ ವಾಯ್ಸ್ ವೈರಲ್ ಆಗುತ್ತಿದ್ದು, ಈ ವೀಡಿಯೋದಲ್ಲಿರುವ ವ್ಯಕ್ತಿ ಈ ಹಿಂದೆ ಜೆಡಿಎಸ್ನಲ್ಲಿ ಮತ್ತು ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಪುತ್ತೂರು ಬಪ್ಪಳಿಗೆ ನಿವಾಸಿ ಅದ್ದು ಪಡೀಲ್ ಎನ್ನಲಾಗುತ್ತಿದೆ.
ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಾನೂನು ಮೂಲಕ ಹೋರಾಡುತ್ತೇನೆ- ಅದ್ದು ಪಡೀಲ್:
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಚಿತ್ರ ನನ್ನದಲ್ಲ. ಇದೆಲ್ಲಾ ಕುತಂತ್ರಿಗಳ ಷಡ್ಯಂತ್ರ, ಈ ಬಗ್ಗೆ ಕಾನೂನು ಮುಖಾಂತರ ಹೋರಾಟ ಮಾಡುತ್ತೇನೆ ಎಂದು ಅದ್ದು ಪಡೀಲ್ ಅವರು ಶಾಸಕರು ಪುತ್ತೂರು ಎಂಬ ವಾಟ್ಸಾಪ್ ಗ್ರೂಪ್ಗೆ ಸ್ಪಷ್ಟನೆ ಹಾಕಿ ಎಚ್ಚರಿಕೆ ನೀಡಿದ್ದಾರೆ.