ಮಂಗಳೂರು: ಕೊರೋನಾ ಎರಡನೇ ಅಲೆ ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ಹಿಂದಿನ ಲಾಕ್ ಡೌನ್ ಯಥಾವತ್ತಾಗಿ ಪಾಲಿಸಲು ದ.ಕ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ದ. ಕ ಜಿಲ್ಲಾಡಳಿತ ಹೊಸ ಗೈಡ್ ಲೈನ್ಸ್ :
- 6ರಿಂದ 10 ಗಂಟೆ ತನಕ ಅಗತ್ಯ ವಸ್ತು ಖರೀದಿಗೆ ಅವಕಾಶ
- ವಾಹನ ಶೋ ರೂಂ ಹೊರತುಪಡಿಸಿ ಗ್ಯಾರೇಜ್ಗೆ ಅವಕಾಶ
- ಮಧ್ಯಾಹ್ನ 12 ಗಂಟೆ ತನಕ ಗ್ಯಾರೇಜ್ಗೆ ಅವಕಾಶ
- ಕನ್ನಡಕದ ಅಂಗಡಿ ಮಧ್ಯಾಹ್ನ 12 ಗಂಟೆ ತನಕ ತೆರೆಯಬಹುದು
- ಇನ್ನುಳಿದಂತೆ ದ.ಕ ಜಿಲ್ಲೆಯಲ್ಲಿ ಯಾವುದಕ್ಕೂ ಅನುಮತಿ ಇಲ್ಲ
- ಜೂ. 21ರ ತನಕ ಹೊಸ ಆದೇಶ ಜಾರಿಯಲ್ಲಿರುತ್ತದೆ.
ಇನ್ನುಳಿದಂತೆ ಈಗಿರುವ ನಿಯಮಗಳೇ ಜಾರಿಯಲ್ಲಿರುತ್ತದೆ.