ಕಾರ್ಕಳ : ತಾಲೂಕಿನ ನಲ್ಲೂರು ಪಾಜೆಗುಡ್ಡೆ ಬಳಿ ಬೈಕ್ ಮತ್ತು ಗೂಡ್ಸ್ ವಾಹನದ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ನಲ್ಲಿದ್ದ 5 ಜನರಲ್ಲಿ ಮೂರು ಮಕ್ಕಳನ್ನು ಸೇರಿ, 4 ಮಂದಿ ಮೃತಪಟ್ಟ ಘಟನೆ ನಡೆದಿದೆ.
ಬೈಕ್ ನಲ್ಲಿ ಪತಿ, ಪತ್ನಿ ಹಾಗೂ 3 ಮಕ್ಕಳು ಬರುತ್ತಿದ್ದಾಗ ಪಾಜೇಗುಡ್ಡೆ ಬಳಿ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಬೈಕ್ ನಲ್ಲಿ ಸುರೇಶ್ ಆಚಾರ್ಯ (36) ಮೀನಾಕ್ಷಿ ಹೆಂಡತಿ (32) ಸುಮಿಕ್ಷಾ ಮಗಳು (7), ಸುಶ್ಮಿತಾ (5) ಸುಶಾಂತ್ (2) ಸವಾರರಿದ್ದು, ಮಹಿಳೆಯನ್ನು ಹೊರತುಪಡಿಸಿ ಉಳಿದೆಲ್ಲರೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ..
ಮೃತರು ವೇಣೂರು ಗಾಂಧಿನಗರದವರು ಎನ್ನಲಾಗಿದೆ.