ಪುತ್ತೂರು : ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಎವಿಯೇಷನ್ ಆ್ಯಂಡ್ ಮ್ಯಾನೇಜ್ಮೆಂಟ್ ಅ.3 ರಂದು ಪುತ್ತೂರು ನಗರದ ಎಪಿಎಂಸಿ ರಸ್ತೆಯಲ್ಲಿರುವ ಮಾನೈ ಕಟ್ಟಡದಲ್ಲಿ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಹೇಮಾಂಬಿಕ ಸುದರ್ಶನ್, ಉಪಾಧ್ಯಕ್ಷೆ ಹೇಮಲತಾ ಗೋಕುಲ್‌ನಾಥ್, ಕಾರ್ಯದರ್ಶಿ ಗೋಕುಲ್‌ನಾಥ್ ಪಿವಿ ಮತ್ತು ಕೋಶಾಧಿಕಾರಿ ಸುದರ್ಶನ್ ಮೂಡಬಿದ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐಎಟಿಎಯಲ್ಲಿ ನೋಂದಾಯಿತ ಸಂಸ್ಥೆಯಾಗಿರುವ ಬೆಂಗಳೂರಿನ ಸ್ಕೈ ಬರ್ಡ್ ಎವಿಯೇಷನ್ ಸಂಸ್ಥೆಯ ಅಧಿಕೃತ ಪ್ರಾಂಚೈಸಿ ಸಂಸ್ಥೆಯಾಗಿರುವ ಶ್ರೀ ಪ್ರಗತಿ ವಿಸ್ತಾರ ಎವಿಯೇಷನ್ ಕಾಲೇಜು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ವಿಮಾನಯಾನ ತರಬೇತಿಗೆ ಬೇಕಾದ ‘ಮಾಕ್’ ವಿಮಾನ ಕ್ಲಾಸ್ ರೂಂ ಸೇರಿದಂತೆ ಇನ್ನಿತರ ಎಲ್ಲಾ ಸೌಲಭ್ಯವನ್ನು ಹೊಂದಿದೆ.
ಈ ಕ್ಷೇತ್ರದಲ್ಲಿ ಅನುಭವ ಪಡೆದಿರುವ ನುರಿತ ಅಧ್ಯಾಪಕ ವೃಂದ ತರಬೇತಿ ನೀಡಲಿದ್ದು, ಆಕಾಶದೆತ್ತರಕ್ಕೆ ಹಾರಲು ಇಚ್ಚಿಸುವ ಯುವ ಸಮೂಹಕ್ಕೆ ರೆಕ್ಕೆಗಳನ್ನು ಕಟ್ಟಿಕೊಡಲಿದೆ.
ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶಿಸ್ತು ಬದ್ಧವಾಗಿ ಆಸಕ್ತಿ ಇರುವ ವಿಭಾಗದಲ್ಲಿ ಪರಿಣಿತರನ್ನಾಗಿ ಮಾಡುವ ಮೂಲಕ ವಿಮಾನಯಾನ ಕ್ಷೇತ್ರದಲ್ಲಿ ಲಭ್ಯವಿರುವ ಅವಕಾಶಗಳಿಗೆ ತನ್ನ ಅಭ್ಯರ್ಥಿಗಳನ್ನು ಶ್ರೀ ಪ್ರಗತಿ ವಿಸ್ತಾರ ಪರಿಚಯಿಸಲಿದೆ.