ವಿಟ್ಲ : ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ ಆರೋಪದಡಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಮೈ ನಿವಾಸಿ ರಾಮ ನಾಯ್ಕ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಮೈ ನಿವಾಸಿ ರಾಮ ನಾಯ್ಕ್ ಸುಮಾರು 50 ಸೇಂಟ್ಸ್ ಸರಕಾರಿ ಭೂಮಿಯನ್ನು ಸ್ವಾಧೀನತೆಯಿಂದ ನಡೆಸುತ್ತಿದ್ದರು. ಸೆ.28 ರಂದು ರಾಮ ನಾಯ್ಕ್ ಸ್ವಾಧೀನದಲ್ಲಿರುವ ಜಾಗದಲ್ಲಿ ನೆರೆವಾಸಿ ಶಿವಪ್ರಸಾದ್ ಭಟ್ ರವರ ಮನೆಯ ಕೆಲಸದವರು ಹಗಲು ವೇಳೆಯಲ್ಲಿ ಸೊಪ್ಪು ಕಡಿಯುವ ಕೆಲಸ ಮಾಡುತ್ತಿದ್ದುದನ್ನು ಗಮನಿಸಿದ ರಾಮ ನಾಯ್ಕ್ ಅವರ ಮಗ ಭರತ್ ಕುಮಾರ್ ಮೂಲಕ ತುರ್ತು ಸೇವೆ 112 ಕರೆ ಮಾಡಿದ್ದು, ಸ್ಥಳಕ್ಕೆ ಬಂದ ತುರ್ತು ಸ್ಪಂದನಾ ಪೊಲೀಸರು ಸಿವಿಲ್ ಪ್ರಕರಣವಾಗಿದ್ದು, ಸಂಬಂಧಪಟ್ಟ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ತಿಳಿಸಿದ್ದು, ಸಂಜೆ ಶಿವಪ್ರಸಾದ್ ರಾಮ ನಾಯ್ಕ್ ಮನೆಯ ಬಳಿ ಬಂದು ಅವರ ಮನೆಯ ಪೋಟೋಗಳನ್ನು ತೆಗೆಯುತ್ತಿದ್ದುದನ್ನು ನೋಡಿ ಅವರನ್ನು ಪ್ರಶ್ನಿಸಿದಾಗ ಶಿವ ಪ್ರಸಾದ್ ಭಟ್ ರಾಮ ನಾಯ್ಕ್ ರನ್ನು ಉದ್ದೇಶಿಸಿ ನನ್ನ ಜಾಗದಲ್ಲಿ ಕೆಲಸ ಮಾಡಿದರೆ ನಿನಗೆ ಏನು ಸಮಸ್ಯೆ ಎಂದು ಹೇಳಿ, ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ ಜಾತಿ ನಿಂದನೆ ಮಾಡಿದ್ದು, ಇನ್ನು ಮುಂದಕ್ಕೆ ದೂರು ನೀಡಿದರೆ ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (bns) 2023 (U/s-352,351(2)) ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು (ದೌರ್ಜನ್ಯ ತಡೆ) ತಿದ್ದುಪಡಿ ಮಸೂದೆ 2015 (U/s-3(1)(r),3(1)(s),3(2)(va)) ರಂತೆ ಪ್ರಕರಣ ದಾಖಲಾಗಿದೆ.