ಚಿಂತೆಯಿಲ್ಲದವರಿಗೆ ಸಂತೆಯಲ್ಲೂ ನಿದ್ದೆ ಎಂಬಂತೆ ಕೆಲವರಿಗೆ ಪ್ರಪಂಚವೇ ತಲೆಕೆಳಗಾಗಲಿ ಅದಾವುದರ ಪರಿವೇ ಇಲ್ಲದಂತೆ ಇರುತ್ತಾರೆ. ಆದರೆ ಇಲ್ಲೊಂದು ಘಟನೆಯಲ್ಲಿ ದೇಶವೇ ಅಳಿವು ಉಳಿವಿನ ಪ್ರಶ್ನೆಯಲ್ಲಿರುವಾಗ ಜೋಡಿಗಳಿಬ್ಬರು ವಿವಾಹವಾಗಿದ್ದಾರೆ. ಯುದ್ಧ ಕ್ಷಿಪಣಿಗಳು ಆಕಾಶದಲ್ಲಿ ಹಾರುತ್ತಿರುವಾಗ ಈ ಜೋಡಿ ವಿವಾಹ ಬಂಧಿಯಾಗಿದ್ದಾರೆ.
ಇರಾನ್ ಮತ್ತು ಇಸ್ರೇಲ್ ರಣರಂಗದಲ್ಲಿ ಹೋರಾಡುತ್ತಿದೆ. ರಕ್ತಕ್ರಾಂತಿಯತ್ತ ತಿರುಗುತ್ತಿದೆ. 100, 200 ಕ್ಷಿಪಣಿಗಳನ್ನು ಬಿಡುವ ಮೂಲಕ ಜನರನ್ನು ಹೊಡೆದುಳಿಸುತ್ತಿದ್ದಾರೆ. ಅಲ್ಲಿದ್ದವರು ಉಸಿರು ಬಿಡಿ ಹಿಡಿದುಕೊಂಡು ಬಂಕರ್ಗಳನ್ನು ಸೇರುತ್ತಿದ್ದಾರೆ. ಇಂದು ಬದುಕಿದರೆ ನಾಳೆ ಜೀವನ ಎಂಬಂತಿದ್ದಾರೆ. ಆದರೆ ಇದರ ನಡುವೆ ಜೋಡಿಯೊಂದು ಇದಾವುದರ ಪರಿವೇ ಇಲ್ಲದಂತೆ ವಿವಾಹವಾಗಿದ್ದಾರೆ.
ಕಾರ್ಮೋಡದ ನಡುವೆ ಯುದ್ಧದ ಕ್ಷಿಪಣಿಗಳು ಹಾರಾಡುತ್ತಿರುವಾಗ ಜೋಡಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸದ್ಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರ ಅಚ್ಚರಿಗೆ ಕಾರಣವಾಗಿದೆ.
ಮೇಲ್ನೋಟಕ್ಕೆ ಇಸ್ರೇಲ್ ಯಹೂದಿ ಜೋಡಿ ಮದುವೆ ಸಂಭ್ರಮದಲ್ಲಿದ್ದರೆ, ಅತ್ತ ಇರಾನಿ ಕ್ಷಿಪಣಿಗಳು ಆಕಾಶದಲ್ಲಿ ಹಾರಿ ಬರುತ್ತಿವೆ. ಹಾವಾಸಿ ಎಂಬ ಇನ್ಸ್ಟಾ ಖಾತೆ ಈ ಜೋಡಿಯ ಫೋಟೋವನ್ನು ಹಂಚಿಕೊಂಡಿದೆ.