ಬಿಗ್ ಬಾಸ್ ಸ್ಪರ್ಧಿಯೊಬ್ಬರು ಹಿಂದೂ ಯುವತಿಯನ್ನು ಪ್ರೀತಿಸಿ ಮಂತಾತರ ಮಾಡಿ ಮದುವೆಯಾದ ಘಟನೆ ನಡೆದಿದೆ. ಆತನ ಸಹೋದರಿಯೇ ಈ ಸಂಗತಿಯನ್ನು ಬಯಲು ಮಾಡಿದ್ದು, ಸದ್ಯ ಯುವತಿಯ ಫೋಟೋ, ನಿಜ ಹೆಸರನ್ನು ಬಯಲು ಮಾಡಿದ್ದಾಳೆ.
ಬಿಗ್ ಬಾಸ್ ಓಟಿಟಿ 3 ಸ್ಪರ್ಧಿ ಅದ್ನಾನ್ ಶೇಖ್ 2023ರಲ್ಲಿ ಯುವತಿಯೊಬ್ಬಳನ್ನು ಪ್ರೀತಿಸಿ ವಿವಾಹವಾಗಿದ್ದಾನೆ. ಆಯೇಷಾ ಶೇಖ್ ಎಂಬಾಕೆಯನ್ನು ಲವ್ ಮಾಡಿ ಆಕೆಯ ಜೊತೆಗೆ ಸಂಸಾರ ನಡೆಸುತ್ತಿದ್ದಾನೆ. ಆದರೆ ಆತನ ಸಹೋದರಿಯಾದ ಇಫಾತ್ ಎಂಬಾಕೆ ಸಹೋದರ ವಿವಾಹವಾದ ಯುವತಿ ಹಿಂದೂ ಎಂಬ ಸೀಕ್ರೆಟ್ ಬಿಚ್ಚಿಟ್ಟಿದ್ದಾಳೆ.
ಅದ್ನಾನ್ ಖೇನ್ ಪತ್ನಿಯಾದ ಆಯೇಷಾ ನಿಜ ಹೆಸರು ರಿಧಿ ಜಾಧವ್ ಎಂದಾಗಿದ್ದು, ಆಕೆ ಹಿಂದೂ ಧರ್ಮದವಳಾಗಿದ್ದಾಳೆ. ಆಕೆಯನ್ನು ಪ್ರೀತಿಸಿ ಮತಾಂತರ ಮಾಡಿ ಮದುವೆಯಾಗಿದ್ದಾನೆ ಎಂದು ಸಹೋದರಿ ಇಫಾತ್ ಆರೋಪಿಸಿದ್ದಾಳೆ.
ಆಯೇಷಾ ತನ್ನ ಪತಿ ಅದ್ನಾನ್ ಮತ್ತು ಮಾವನಿಂದ ದೈಹಿಕ ಹಲ್ಲೆಗೆ ಒಳಗಾಗುವ ವಿಚಾರ ತಿಳಿದಂತೆ ಇಫಾತ್ ಸಹೋದರನ ಮತ್ತೊಂದು ಮುಖ ಬಯಲು ಮಾಡಿದ್ದಾಳೆ. ಮದುವೆ ಸಮಯದಲ್ಲೂ ಆಕೆಯ ಮುಖ ಬಯಲಾಗದಂತೆ ಅತಿಥಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದನು ಎಂದು ಹೇಳಿದ್ದಾಳೆ.
ಸದ್ಯ ಅದ್ನಾನ್ ವಿರುದ್ಧ ಇಫಾತ್ ಎಫ್ಐಆರ್ ದಾಖಲಿಸಿದ್ದಾಳೆ. ಆಯೇಷಾಳಾಗಿ ಬದಲಾದ ರಿಧಿ ಜಾದವ್ ಫೋಟೋವನ್ನು ಇನ್ಸ್ಟಾಗ್ರಾಂ ಮೂಲಕ ಬಹಿರಂಗ ಪಡಿಸಿದ್ದಾಳೆ. ರಿಧಿ ಜಾದವ್ ಇಂಡಿಗೋದ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದು, 2023ರಲ್ಲಿ ನವೆಂಬರ್ ತಿಂಗಳಿನಲ್ಲಿ ವಿವಾಹವಾದರು ಎಂದು ಇಫಾತ್ ಹೇಳಿಕೊಂಡಿದ್ದಾಳೆ.