ಮಂಗಳೂರು: ಕೆಎಸ್ಆರ್ಟಿಸಿ ಮಂಗಳೂರು ವಿಭಾಗವು ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕೆ ಹಾಗೂ ಮಂಗಳೂರು-ಮಡಿಕೇರಿ, ಮಂಗಳೂರು-ಕೊಲ್ಲೂರು, ಮಂಗಳೂರು-ಮುರ್ಡೇಶ್ವರ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಅ.3ರಿಂದ 12ರ ವರೆಗೆ ಹಮ್ಮಿಕೊಳ್ಳಲಿದೆ.
ದಸರಾ ನವದುರ್ಗ ದರ್ಶನ ಪ್ಯಾಕೇಜ್ ಮಂಗಳೂರು ಬಸ್ ನಿಲ್ದಾಣದಿಂದ ಶ್ರೀ ಮಂಗಳಾದೇವಿ ದೇವಸ್ಥಾನ-ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ-ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ – ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (ಮಧ್ಯಾಹ್ನದ ಊಟ) – ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ಹಾಗೂ ಬೀಚ್ – ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ- ಶ್ರೀ ಉರ್ವ ಮಾರಿಯಮ್ಮ ದೇವಸ್ಥಾನ (ಸಂಜೆ ಉಪಹಾರ)- ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ನವದುರ್ಗಾ ದರ್ಶನ – ಮಂಗಳೂರು ಬಸ್ ನಿಲ್ದಾಣ. ವಯಸ್ಕರಿಗೆ 400 ರೂ., ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) 300 ರೂ. (ಬೆಳಗ್ಗೆ 8 ಗಂಟೆಗೆ ಹೊರಟು ರಾತ್ರಿ 8.30ಕ್ಕೆ ಮಂಗಳೂರು ಬಸ್ ನಿಲ್ದಾಣ)
ಮಡಿಕೇರಿ ಪ್ಯಾಕೇಜ್
ಮಂಗಳೂರು- ಮಡಿಕೇರಿ-ರಾ ಜಾಸೀಟ್- ಅಬ್ಬಿಫಾಲ್ಸ್ -ನಿಸರ್ಗ ಧಾಮ- ಗೋಲ್ಡನ್ ಟೆಂಪಲ್-ಮಂಗಳೂರು ಬಸ್ ನಿಲ್ದಾಣ. ವಯಸ್ಕರಿಗೆ 500 ರೂ. ಮಕ್ಕಳಿಗೆ (6ವರ್ಷದಿಂದ 12 ವರ್ಷದವರಿಗೆ) 400 ರೂ. ಬೆಳಗ್ಗೆ 7 ಗಂಟೆಗೆ ಹೊರಟು ರಾತ್ರಿ 9ಕ್ಕೆ ಮಂಗಳೂರು ಬಸ್ ನಿಲ್ದಾಣ.
ಮಂಗಳೂರು-ಕೊಲ್ಲೂರು ಮಂಗಳೂರು ಬಸ್ ನಿಲ್ದಾಣ -ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ-ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ (ಮಧ್ಯಾಹ್ನದ ಊಟ) – ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ- ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ-ಮಂಗಳೂರು ಬಸ್ ನಿಲ್ದಾಣ. ವಯಸ್ಕರಿಗೆ 500, ಮಕ್ಕಳಿಗೆ 400 ರೂ. ಬೆಳಗ್ಗೆ 8 ಗಂಟೆಗೆ ಹೊರಟು ರಾತ್ರಿ 8 ಗಂಟೆಗೆ ಬಸ್ ನಿಲ್ದಾಣ.
ಮಂಗಳೂರು-ಮುರ್ಡೇಶ್ವರ ಮಂಗಳೂರು ಬಸ್ ನಿಲ್ದಾಣ – ಮುರ್ಡೇಶ್ವರ ದೇವಸ್ಥಾನ – ಚಂಡಿಕಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕುಂಭಾಶಿ – ಆನೆಗುಡ್ಡೆ ಗಣಪತಿ ದೇವಸ್ಥಾನ ಕುಂಭಾಶಿ – ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ – ಮಂಗಳೂರು ಬಸ್ ನಿಲ್ದಾಣ. ವಯಸ್ಕರಿಗೆ 550, ಮಕ್ಕಳಿಗೆ 450 ರೂ. ಬೆಳಗ್ಗೆ 7 ಗಂಟೆಗೆ ಹೊರಟು ರಾತ್ರಿ 7ಕ್ಕೆ ಮಂಗಳೂರು ಬಸ್ ನಿಲ್ದಾಣ.
ಮಾಹಿತಿಗೆ 7760990720 ಸಂಪರ್ಕಿಸಬಹುದು. ಈ ಪ್ಯಾಕೇಜ್ಗಳಿಗೆ www.ksrtc.in ಮೂಲಕ ಮುಂಗಡ ಆಸನ ಕಾಯ್ದಿರಿಸಬಹುದಾಗಿದೆ.