ಕಳೆದ ವರ್ಷಕ್ಕಿಂತ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ದಸರಾ ಹಬ್ಬ ಆಚರಣೆ ಮಾಡಲಾಗ್ತಿದೆ. ಮೈಸೂರು ಮಾತ್ರವಲ್ಲ, ಶ್ರೀರಂಗಪಟ್ಟಣ, ಮಂಗಳೂರು, ರಾಯಚೂರು, ಚಿಕ್ಕಮಗಳೂರು ಹೀಗೆ ಹಲವು ಕಡೆಗಳಲ್ಲಿ ನಾಡಹಬ್ಬವನ್ನ ಆಚರಣೆ ಮಾಡಲಾಗ್ತಿದೆ.
ನಾಡಹಬ್ಬ ದಸರಾ ಮಕ್ಕಳಿಗೆ ಶಾಲಾ ಕಾಲೇಜು ರಜಾ. ಊರುಗಳಿಗೆ ತೆರಳಿ ಫುಲ್ ಮಜಾ ಅಂತಾ ದಸರಾ ರಜೆ ಬಗ್ಗೆ ಪ್ಲಾನ್ ಮಾಡ್ಕೊಂಡಿರೋ ಜನ. ತಮ್ಮ ತವರು ಮೈಸೂರು ಅಂತಾ ಹಲವೆಡೆ ತೆರಳೋದಕ್ಕೆ ಸಕಲ ಸಿದ್ಧತೆ ಮಾಡ್ಕೊಂಡಿದ್ದಾರೆ. ಹಾಗೆಯೇ ಹೊರಡೋದಕ್ಕೆ ಸಿದ್ಧವಾಗಿರೋ ಜನಕ್ಕಾಗಿ ಕರ್ನಾಟಕ ಸಾರಿಗೆ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 9 ರಿಂದ ಅಕ್ಟೋಬರ್ 12 ರವರೆಗೆ 2000ಕ್ಕೂ ಹೆಚ್ಚು ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ದಸರಾ ಬಂತೆಂದರೆ ಗೊಂಬೆ ಕೂರಿಸುವ ಸಂಭ್ರಮ ಪ್ರಾರಂಭವಾಗಿ, ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದ ಬಾಲಕೃಷ್ಣರವರು ನವರಾತ್ರಿ ಪ್ರಯುಕ್ತ ಬೊಂಬೆಗಳನ್ನ ಕೂರಿಸಿದ್ದು, ಕಳಸ ಪಟ್ಟಣದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕಳೆದ 16 ವರ್ಷಗಳಿಂದ ದಸರಾ ಸಂದರ್ಭದಲ್ಲಿ ಬೊಂಬೆಗಳನ್ನ ಕೂರಿಸುತ್ತಿದ್ದ ಇವರ ಬೊಂಬೆಗಳನ್ನ ನೋಡಲು ಕಳಸ ಸುತ್ತಲಿನ ವಿವಿಧ ಗ್ರಾಮಗಳಿಂದ ಜನರು ಆಗಮಿಸುತ್ತಾರೆ.
09/10/2024 ರಿಂದ 12/10/2024ರವರೆಗೆ ಬೆಂಗಳೂರಿನಿಂದ ರಾಜ್ಯದ ಮತ್ತು ಅಂತರ್‌ರಾಜ್ಯದ ವಿವಿಧ ಸ್ಥಳಗಳಿಗೆ 2000ಕ್ಕೂ ಹೆಚ್ಚು ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಈ ಬಸ್‌ಗಳು ಹೊರಡಲಿವೆ. ನಂತರ ರಾಜ್ಯದ ಮತ್ತು ಅಂತರ್‌ರಾಜ್ಯದ ವಿವಿಧ ಸ್ಥಳಗಳಿಂದ ವಾಪಸ್ ಬೆಂಗಳೂರಿಗೆ ಬರಲು 13/10/2024ರಿಂದ 14/10/2024ರವರೆಗೆ ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು ಕೆಎಸ್ಆರ್ಟಿಸಿ ಪ್ರಕಟಣೆ ತಿಳಿಸಿದೆ.
ಈ ವಿಶೇಷ ಬಸ್‌ಗಳು ಎಲ್ಲೆಲ್ಲಿಗೆ?
ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆರಾಜ್ಯಗಳಲ್ಲಿನ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪೂನಾ, ಏರ್ನಾಕುಲಂ, ಪಾಲ್ಗಾಟ್ ಹಾಗೂ ಇತರೆ ಸ್ಥಳಗಳಿಗೆ ಈ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.


























