ಅನೇಕ ಪಾಕಿಸ್ತಾನಿ ಕ್ರಿಕೆಟಿಗರು ಭಾರತೀಯ ಯುವತಿಯರನ್ನ ವಿವಾಹವಾಗಿದ್ದಾರೆ. ಇದೀಗ ಮತ್ತೋರ್ವ ಪಾಕ್ ಮಾಜಿ ಕ್ರಿಕೆಟಿಗ ಭಾರತೀಯ ಯುವತಿಯನ್ನು ವರಿಸಲು ಮುಂದಾಗಿದ್ದಾರೆ.
ಪಾಕ್ ಮಾಜಿ ನಾಯಕ ಜಹೀರ್ ಅಬ್ಬಾಸ್, ಶೋಯೆಬ್ ಮಲಿಕ್, ಮೊಹ್ಸಿನ್ ಖಾನ್ ಮತ್ತು ಹಸನ್ ಅಲಿ ಭಾರತೀಯರ ಯುವತಿಯನ್ನು ವಿವಾಹವಾಗಿರುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಆದರೀಗ ರಝಾ ಹಸನ್ ಭಾರತೀಯ ಮೂಲದ ಪೂಜಾ ಬೋಮನ್ ಎಂಬಾಕೆಯನ್ನು ವರಿಸಲಿದ್ದಾರೆ.
ರಝಾ ಹಸನ್ ಮತ್ತು ಪೂಜಾ ಬೋಮನ್ ನಿಶ್ಚಿತಾರ್ಥ ನ್ಯೂಯಾರ್ಕ್ನಲ್ಲಿ ನಡೆದಿದ್ದು, ಮುಂದಿನ ವರ್ಷ ವಿವಾಹ ನಡೆಯಲಿದೆ ಎನ್ನಲಾಗುತ್ತಿದೆ.
ಪೂಜಾ ಜೊತೆಗಿನ ನಿಶ್ಚಿತಾರ್ಥ ಕುರಿತು ರಝಾ ತನ್ನ ಇನ್ಸ್ಟಾದಲ್ಲೂ ಈ ವಿಚಾರ ಹಂಚಿಕೊಂಡಿದ್ದಾರೆ. 32 ವರ್ಷದ ಈ ವ್ಯಕ್ತಿ ಎಡಗೈ ಸ್ಪಿನ್ನರ್ ಆಗಿದ್ದು, ಪಾಕ್ ಪರ ಕೇವಲ 1 ODI ಮತ್ತು 10 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ರಾಝಾ ಹಸನ್ ಏಕದಿನ ಪಂದ್ಯದಲ್ಲಿ 1 ವಿಕೆಟ್ ಕಿತ್ತರೆ, ಟಿ20 ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 10 ಪಂದ್ಯದಲ್ಲಿ 10 ವಿಕೆಟ್ ಪಡೆದಿದ್ದಾರೆ. 2014ರಲ್ಲಿ ಪಾಖ್ ಪರವಾಗಿ ಕೊನೆಯ ಅಂತರಾಷ್ಟ್ರೀಯ ಪಂದ್ಯ ಆಡಿದ್ದಾರೆ.


























