ಮೈಸೂರು: ಜಿಲ್ಲೆಯ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿಯವರನ್ನ ವಾಪಸ್ ತರಬೇಕೆಂದು ಆನ್ಲೈನ್ನಲ್ಲಿ ಬೃಹತ್ ಅಭಿಯಾನ ಶುರುವಾಗಿದೆ.
ರೋಹಿಣಿ ಸಿಂಧೂರಿ ಪರ ಆನ್ಲೈನ್ ಪಿಟಿಷನ್ ಹಾಕಿ, ಅವರನ್ನ ಮತ್ತೆ ಮೈಸೂರು ಡಿಸಿಯಾಗಿ ನೇಮಿಸುವಂತೆ ಒತ್ತಾಯಿಸಲಾಗ್ತಿದೆ. ‘ಚೇಂಜ್ ಡಾಟ್ ಆರ್ಗ್’ ಸಾಮಾಜಿಕ ಮಾಧ್ಯಮದಲ್ಲಿ “ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ” ಹೆಸರಲ್ಲಿ ಸಹಿ ಸಂಗ್ರಹ ಮಾಡಲಾಗ್ತಿದೆ. ಈಗಾಗಲೇ ಇದನ್ನ ಬೆಂಬಲಿಸಿ ಸುಮಾರು 26 ಸಾವಿರ ಜನರು ಸಹಿ ಹಾಕಿದ್ದಾರೆ.
ತಾನು ಭೂ ಮಾಫಿಯಾದ ಬಲಿ ಪಶು ಎಂದು ಸಿಂಧೂರಿ ಹೇಳಿಕೊಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅವರ ಪರವಾಗಿ ಬೆಂಬಲ ವ್ಯಕ್ತವಾಗುತ್ತಿದೆ. 35 ಸಾವಿರ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಅಭಿಯಾನ ಮುಂದುವರಿದಿದೆ. ಸಹಿ ಸಂಗ್ರಹ ಅಭಿಯಾನದ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.