ವಿಟ್ಲ : ವಿನೂತನ ಯುವಕ ಮಂಡಲ (ರಿ) ಬೊಳಂತಿಮೊಗರು, ವಿಟ್ಲ ಇದರ 22ನೇ ವರ್ಷದ ದಸರಾ ಕ್ರೀಡಾಕೂಟ ನಡೆಯಿತು.

.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಮುರಳಿ ಭಟ್ ನೆರವೇರಿಸಿದರು.

ಅತಿಥಿಗಳಾಗಿ ಮಂಜುಳಾ ವಿನೋದ್ ಶೆಟ್ಟಿ, ಕೇಶವ ಮಾಮೇಶ್ವರ ಭಾಗವಹಿಸಿದರು. ಕೃಷ್ಣಪ್ಪ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಯುವಕ ಮಂಡಲದ ಗೌರವಾಧ್ಯಕ್ಷರಾದ ಬಾಬುರಾಜ್ ಮಾಡ್ತೇಲ್ 22 ವರುಷದ ಯುವಕ ಮಂಡಲದ ಧಾರ್ಮಿಕ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.

ಯುವಕ ಮಂಡಲದ ಕಾರ್ಯದರ್ಶಿ ಪ್ರವೀಣ್ ರಾಜ್ ಕಾಮಟ ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ನಿತಿನ್ ಬೊಡ್ಡೋಣಿ ವಂದಿಸಿದರು.
ಪುರಂದರ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಬೊಳಂತಿಮೊಗರು ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ವಿಭಾಗದಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಯುವಕ ಮಂಡಲ ಅಧ್ಯಕ್ಷರಾದ ನವೀನ್ ಚಂದ್ರ ನಡವಡ್ಕ ಸನ್ಮಾನಿಸಿದರು. ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಉಮೇಶ್ ಮಾಮೇಶ್ವರ ಕಟ್ಟೆ ಲಕ್ಷ್ಮಣ ನಾಯ್ಕ ಉಪಸ್ಥಿತರಿದ್ದರು. ಕರುಣಾಕರ ನಾಯ್ತೋಟ್ಟು ಹಾಗೂ ಉಮೇಶ್ ಮಾಡ್ತೇಲ್ ರನ್ನು ಸನ್ಮಾನಿಸಲಾಯಿತು.
ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು. ರವಿ ಅಂಚನ್ ಕಾರ್ಯಕ್ರಮ ನಿರೂಪಿಸಿದರು, ಪದ್ಮನಾಭ ಸ್ವಾಗತಿಸಿದರು. ಪುರಂದರ ಅಂಚನ್ ವಂದಿಸಿದರು.




























