ಪುತ್ತೂರು : ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಇವರು ನವರಾತ್ರಿಯ ಪ್ರಯುಕ್ತ ಆಯೋಜಿಸಿದ ಗಾನ ಸುಧಾರಸ ಕಾರ್ಯಕ್ರಮ ನವಚೇತನ ರಿಟೈರ್ಮೆಂಟ್ ಟೌನ್ಶಿಪ್ ಶಾಂತಿಗೋಡಿನಲ್ಲಿ ನಡೆಯಿತು.

ದ್ವಾರಕಾ ಕಲಾ ಶಾಲೆಯ ವಿದ್ಯಾರ್ಥಿಗಳಾದ ಅಕ್ಷರಿ, ವಂಶಿಕ, ಆದಿತ್ಯ ಕೃಷ್ಣ, ಸನಿಹ ಇವರಿಂದ ಕೀಬೋರ್ಡ್ ವಾದನ ಕಾರ್ಯಕ್ರಮವು ಗುರುಗಳಾದ ಬಾಬಣ್ಣ ಮಾಸ್ಟರ್ ಅವರ ಮಾರ್ಗದರ್ಶನದಲ್ಲಿ ಜರುಗಿತು.

ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಹಾಗೂ ಉಪಾಧ್ಯಕ್ಷರಾದ ಅಶ್ವಿನಿ ಎನ್ ಇವರು ನವಚೇತನ ರಿಟೈರ್ಮೆಂಟ್ ಟೌನ್ಶಿಪ್ ನ ರೂವಾರಿಗಳಾದ ಡಾ. ಶಾಮ್ ಭಟ್ ದಂಪತಿಗಳನ್ನು “ಸೇವಾಶ್ರೀ” ಪ್ರಶಸ್ತಿಯೊಂದಿಗೆ ಗೌರವಿಸಿದರು.

ಗಾನ ಸುಧಾರಸ ಕಾರ್ಯಕ್ರಮವನ್ನು ಹಿರಿಯ ಗಾಯಕರಾದ ವೆಂಕಟಕೃಷ್ಣ ಭಟ್ ಮತ್ತು ತಂಡದವರು ಸುಮಾರು 1ಗಂಟೆ 30 ನಿಮಿಷಗಳ ಕಾಲ ನಡೆಸಿಕೊಟ್ಟರು.
ಪ್ರಾರ್ಥನೆಯನ್ನು ನಿಯತಿ ಭಟ್ ನಡೆಸಿದರು. ಧನ್ಯಶ್ರೀ ಸ್ವಾಗತ ಕೋರಿದರು. ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಅಮೃತಕೃಷ್ಣ ಎನ್ ಧನ್ಯವಾದ ಅರ್ಪಿಸಿದರು.
ದುರ್ಗಾ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ನವಚೇತನ ಬಡಾವಣೆ ನಿವಾಸಿಗಳು ದ್ವಾರಕಾ ಪ್ರತಿಷ್ಠಾನದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.



























