ಉತ್ತರ ಪ್ರದೇಶ : ಶಿಕ್ಷಕಿಯ ಅಶ್ಲೀಲ ವೀಡಿಯೋ ಚಿತ್ರೀಕರಿಸಿ ಅವರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
10ನೇ ತರಗತಿಯ ವಿದ್ಯಾರ್ಥಿ ಹಾಗೂ ಮೂವರು ಸ್ನೇಹಿತರು ಸೇರಿ ಈ ಕೃತ್ಯವೆಸಗಿದ್ದಾರೆ.
ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಸೇರಿ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಹಂಚಿಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶಿಕ್ಷಕಿ ತನ್ನ ನಿವಾಸದಲ್ಲಿ ವಿದ್ಯಾರ್ಥಿಗೆ ಪಾಠ ಹೇಳುತ್ತಿದ್ದರು. ಆರೋಪಿ ಆಕೆ ಸ್ನಾನ ಮಾಡುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಆಕೆಗೆ ಶಾರೀರಿಕ ಸಂಬಂಧ ಕಲ್ಪಿಸಲು ವಿಡಿಯೋ ಬಳಸಿ ಬ್ಲಾಕ್ ಮೇಲ್ ಮಾಡಿದ್ದಾನೆ.
ಶಿಕ್ಷಕಿ ಇದಕ್ಕೆ ನಿರಾಕರಿಸಿದಾಗ ವಿದ್ಯಾರ್ಥಿಯು ತನ್ನ ಸ್ನೇಹಿತರಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾನೆ. ನಂತರ ಅದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದರು. ಸಾರ್ವಜನಿಕ ಅವಮಾನಕ್ಕೆ ಹೆದರಿದ ಶಿಕ್ಷಕಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಮಿಷನ್ ಶಕ್ತಿ ಅಭಿಯಾನದ ಬೆಂಬಲ ತಂಡವು ಮಧ್ಯಪ್ರವೇಶಿಸಿತು, ಆಗ್ರಾದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸೂರಜ್ ರೈ ಅವರು ವಿದ್ಯಾರ್ಥಿ ಮತ್ತು ಅವರ ಮೂವರು ಸಹಚರರನ್ನು ಬಂಧಿಸಿದ್ದಾರೆ.