ಕುಂದಾಪುರ : ವರದಕ್ಷಿಣೆಗಾಗಿ ಪತಿ ಹಿಂಸೆ ನೀಡುತ್ತಿದ್ದಾರೆ ಎಂದು ಕಂದಾವರ ಗ್ರಾಮದ ವಂದನಾ (35) ದ.ಕ. ಜಿಲ್ಲೆಯ ಪುತ್ತೂರಿನ ರಾಘವೇಂದ್ರ ಮಠದ ಹತ್ತಿರ ಕಲ್ಲಾರೆಯ ಪ್ರದೀಪ ಕಂಪೌಂಡ್‌ನ ನಿವಾಸಿ ಪ್ರದೀಪ ಅವರ ವಿರುದ್ಧ ದೂರು ನೀಡಿದ್ದಾರೆ.
2018ರಲ್ಲಿ ವಿವಾಹವಾಗಿದ್ದು 22 ಪವನ್ ತೂಕದ ಚಿನ್ನದ ಒಡವೆ ಹಾಗೂ 3 ಲಕ್ಷ ರೂ ಹಣ ನಗದಾಗಿ ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು.
ಪ್ರದೀಪ್ ಬ್ಯಾಂಕ್ ನಲ್ಲಿ ಉದ್ಯೋಗ ಮಾಡಿಕೊಂಡಿದ್ದು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾಗ ಪ್ರದೀಪ್ ಹಾಗೂ ಸಹೋದರಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಇದರಿಂದ ನೊಂದು ವಂದನಾ ಆತ್ಮಹತ್ಯೆಗೂ ಪ್ರಯತ್ನಿಸಿದ್ದರು.
ಗರ್ಭಿಣಿಯಾಗಿದ್ದಾಗಲೂ ಹೆಚ್ಚಿನ ವರದಕ್ಷಿಣೆ ಬೇಡಿಕೆ ಇಟ್ಟು ನೀಡುವ ಹಿಂಸೆ ತಾಳದೇ ತವರು ಮನೆಗೆ ಬಂದಿದ್ದು, ಗಂಡು ಮಗುವಿಗೆ ಜನ್ಮ ನೀಡಿದ ಬಳಿಕವೂ ತವರು ಮನೆಗೂ ಬಂದು ಹಿಂಸೆ ನೀಡಿದ್ದಾರೆ ಎಂದು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.