ಪುತ್ತೂರು : ಮಂಗಳೂರು ಕಡೆ ಚಲಿಸುತ್ತಿದ್ದ ಮಿನಿ ಬಸ್ ನಿಯಂತ್ರಣ ತಪ್ಪಿ ರಸ್ತೆಯಂಚಿನ ಪ್ರಪಾತಕ್ಕೆ ವಾಲಿದ ಘಟನೆ ಪುತ್ತೂರು ಬೈಪಾಸ್ ರಸ್ತೆ ಬೊಳುವಾರಿನಲ್ಲಿ ನಡೆದಿದೆ.

ಬೈಪಾಸ್ ಮಾರ್ಗವಾಗಿ ಮಂಗಳೂರು ಕಡೆ ಹೋಗುತ್ತಿರುವ ಮಿನಿ ಬಸ್ ಬೈಪಾಸ್ ರಸ್ತೆಯ ಬೊಳುವಾರು ಮಂಜಲ್ಪಡ್ಪು ಮಧ್ಯೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪ್ರಪಾತಕ್ಕೆ ವಾಲಿದ್ದು, ರಸ್ತೆ ಬದಿಯಲ್ಲಿದ್ದ ತಡೆ ಬೇಲಿಗೆ ಡಿಕ್ಕಿಯಾಗಿ ನಿಂತಿದೆ.
ಮಿನಿ ಬಸ್ ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.


























