ಪುತ್ತೂರು : ರೈ ಎಸ್ಟೇಟ್ಸ್ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ಯವರ ನೇತೃತ್ವದಲ್ಲಿ ನಡೆಯಲಿರುವ “ಅಶೋಕ ಜನ – ಮನ” 2024 ದೀಪಾವಳಿ ವಸ್ತ್ರ ವಿತರಣೆ ಹಾಗೂ ಗೂಡುದೀಪ ಸ್ಪರ್ಧೆ ಕಾರ್ಯಕ್ರಮ ನವೆಂಬರ್ 2 ರಂದು ಕೊಂಬೆಟ್ಟುವಿನ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪೂರ್ವಭಾವಿಯಾಗಿ ಶ್ರೀ ಮಹಿಷಮರ್ಧಿನಿ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಎಲ್ಲರನ್ನು ಆಹ್ವಾನವನ್ನೂ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಸೀತಾರಾಮ ಶೆಟ್ಟಿ ಹೆಗ್ಡೆ ಹಿತ್ಲು, ಜಯಪ್ರಕಾಶ್ ಬದಿನಾರು, ಯೋಗೀಶ್ ಸಾಮಾನಿ, ಮುರಳೀಧರ ರೈ, ನಿರಂಜನ್ ರೈ, ಶಿವಪ್ರಸಾದ್ ಶೆಟ್ಟಿ, ದೇವಳದ ವ್ಯವಸ್ಥಾಪಕರಾದ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

ನ.2 ರಂದು ನಡೆಯುವ ಪುತ್ತೂರು ಶಾಸಕರಾದ ಅಶೋಕ್ ರೈ ಅವರ ಅಶೋಕ ಜನ-ಮನ 2024 ಈ ಕಾರ್ಯಕ್ರಮದ ಗ್ರಾಮ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಪುತ್ತೂರು ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಟ್ರಸ್ಟ್ ತಂಡ ತೆರಳಿ ಜನರನ್ನು ಆಹ್ವಾನಿಸಲಿದ್ದೇವೆ. ಕಳೆದ ಬಾರಿಯಂತೆ ಈ ಬಾರಿಯೂ ಬಹಳ ವಿಜೃಂಬಣೆಯಿಂದ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಪೂರ್ವ ಸಿದ್ದತಾ ಕಾರ್ಯ ಆರಂಭಗೊಂಡಿದೆ. ತಾಲೂಕಿನ ಪ್ರತೀಯೊಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವದಿಸಬೇಕೆಂದು ಮನವಿ ಮಾಡುತ್ತಿದ್ದೇನೆ.
ಸುದೇಶ್ ಶೆಟ್ಟಿ, ಕಾರ್ಯಾಧ್ಯಕ್ಷರು, ರೈ ಎಸ್ಟೇಟ್ಸ್ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್



























