ಮಂಗಳೂರು : ನಗರದ ಖ್ಯಾತ ಬಿಲ್ಡರ್ ಜಿತೇಂದ್ರ ಕೊಟ್ಟಾರಿ ಮತ್ತು ಅವರ ಮನೆಯವರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಆರೋಪಿಗಳನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ತನುಷ್ ಶೆಟ್ಟಿ ಮತ್ತು ಅಂಕಿತ್ ಶೆಟ್ಟಿ ಬಂಧಿತರು.
ವಿಮಾನ ನಿಲ್ದಾಣ ಕಡೆಯಿಂದ ಕಾರಿನಲ್ಲಿ ಬರುತ್ತಿದ್ದ ಜಿತೇಂದ್ರ ಅವರನ್ನು ಯುವಕರು ಹಿಂಬಾಲಿಸಿಕೊಂಡು ಬಂದು ಕೊಡಿಯಾಲಬೈಲಿನಲ್ಲಿರುವ ಮನೆಯ ಎದುರು ಹಲ್ಲೆ ನಡೆಸಿದ್ದಾರೆ. ತಡೆಯಲು ಮುಂದಾದ ಜಿತೇಂದ್ರ ಅವರ ಪತ್ನಿ ಮತ್ತು ಪುತ್ರಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಕಾರಣವೇನೆಂದು ಗೊತ್ತಾಗಿಲ್ಲ. ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.