ಮಂಗಳೂರು : ಮನೆಯವರು ಮೊಬೈಲ್ ಅನ್ನು ಕಿತ್ತುಕೊಂಡದ್ದಕ್ಕೆ ಪಿಯುಸಿ ವಿದ್ಯಾರ್ಥಿಯೋರ್ವ ಮನೆ ಬಿಟ್ಟು ಹೋಗಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ವಾಮಂಜೂರು ಸೈಂಟ್ ರೈಮಂಡ್ಸ್ ಪ.ಪೂ. ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ಮೇಗಿನಪೇಟೆ ನಿವಾಸಿ ಮುಹಮ್ಮದ್ ಯಾಸೀನ್ ಅಫ್ನಾನ್ (16) ನಾಪತ್ತೆಯಾದಾತ.
ಈತನಿಗೆ ನಿರಂತರವಾಗಿ ಮೊಬೈಲ್ ನೋಡುವ ಚಟವಿತ್ತು. ಸೆ. 25ರಂದು ಮನೆಯಲ್ಲಿರುವಾಗ ಅವನ ಬಳಿಯಿದ್ದ ಮೊಬೈಲ್ ಅನ್ನು ಮನೆಯವರು ತೆಗೆದುಕೊಂಡಿದ್ದು, ಆ ವಿಚಾರವಾಗಿ ಮಾತುಕತೆ ನಡೆದಿತ್ತು. ಅನಂತರ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಮಹಮ್ಮದ್ ಯಾಸೀನ್ ಕಾಲೇಜಿಗೆ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾನೆ.
5.2 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ಕಪ್ಪು ಕೂದಲು, ಸಾಧಾರಣ ಶರೀರ, ಕೋಲುಮುಖ ಹೊಂದಿದ್ದು ನೀಲಿ ಮತ್ತು ಹಸುರು ಬಣ್ಣದ ನ್ಪೋರ್ಟ್ಸ್ ಟಿ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಹಾಗೂ ಎಡಕೈಗೆ ಸಿಲ್ವರ್ ಕಲರ್ ವಾಚ್ ಧರಿಸಿದ್ದ. ತುಳು, ಕನ್ನಡ, ಬ್ಯಾರಿ ಭಾಷೆಗಳನ್ನು ಮಾತನಾಡುತ್ತಾನೆ. ಮಾಹಿತಿ ದೊರೆತವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ (0824-2220518) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.