ಪುತ್ತೂರು : ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣು ಯುವಶಕ್ತಿ ಬಳಗ (ರಿ.) ಮಜ್ಜಾರಡ್ಕ ಇದರ ನೇತೃತ್ವದಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಮನೆ ಹಸ್ತಾಂತರ ಕಾರ್ಯಕ್ರಮ ಅ.13 ರಂದು ನಡೆಯಲಿದೆ.
ಭಾಗೀರಥಿ ಕಿಟ್ಟಣ್ಣ ರೈ ಸ್ವಾಮಿನಗರ ದಂಪತಿಗಳಿಗೆ ನೂತನವಾಗಿ ನಿರ್ಮಿಸಿರುವ ಶ್ರೀ ವಿಷ್ಣು ಯುವಶಕ್ತಿ ನಿಲಯ ಇದರ ಹಸ್ತಾಂತರ ಕಾರ್ಯಕ್ರಮ, ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಮಕ್ಕಳ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ಹಾಗೂ ಶ್ರಮದಾನ ಮತ್ತು ದಾನಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮ ಹಾಗೂ 7ನೇ ವರ್ಷದ ಕೆಸರ್ಡೊಂಜಿ ದಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಲಿದೆ.
