ವಿಟ್ಲ : ವೇಷ ಹಾಕಲು ಇದೆ ಎಂದು ಮನೆಯಲ್ಲಿ ಹೇಳಿ ಹೋದ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಪಳಿಕೆ ಅಣ್ಣಮೂಲೆ ನಿವಾಸಿ ಸುಂದರ ನಾಯ್ಕ (55) ನಾಪತ್ತೆಯಾದ ವ್ಯಕ್ತಿ.
ಸುಂದರ ನಾಯ್ಕ ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ದಸರಾ ಹಬ್ಬದ ಪ್ರಯುಕ್ತ ವೇಷ ಹಾಕುತ್ತಿದ್ದರು. ಅ.1ರಂದು ಬೆಳಿಗ್ಗೆ ಮನೆಯಲ್ಲಿ ನಾಳೆ ನಾನು ದಸರಾ ಹಬ್ಬದ ವೇಷ ಹಾಕಲು ಇದೆ., ವಿಟ್ಲ ಠಾಣೆಗೆ ಹೋಗಿ ಅನುಮತಿ ಪಡೆಯಲಿದೆ ಎಂದು ಹೇಳಿದ್ದರು. ಸುಂದರ ನಾಯ್ಕ ಅವರ ಪತ್ನಿ ಸಂಜೆ ಮನೆಗೆ ಬಂದಾಗ ಪತಿ ಇರಲಿಲ್ಲ. ದಸರಾ ಹಬ್ಬ ಇರುವುದರಿಂದ ಹಬ್ಬದಲ್ಲಿ ವೇಷ ಹಾಕಿ ಹಬ್ಬ ಮುಗಿದ ನಂತರ ಮನೆಗೆ ಬರಬಹುದೆಂದು ಭಾವಿಸಿದ್ದು, ಆದರೆ ಈವರೆಗೂ ಗಂಡ ಮನೆಗೆ ಬಾರದೇ ಇರುವುದರಿಂದ ಸಂಬಂಧಿಕರಲ್ಲಿ, ನೆರೆಹೊರೆಯವರಲ್ಲಿ ವಿಚಾರಿಸಿದರೂ, ಎಲ್ಲಿಯೂ ಪತ್ತೆಯಾಗಿಲ್ಲ ಎಂದು ಪತ್ನಿ ಠಾಣೆಗೆ ದೂರು ನೀಡಿದ್ದಾರೆ.
ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























