ಸುಳ್ಯ : ದ್ವಿಚಕ್ರ ವಾಹನಗಳ ನಡುವಿನ ಅಪಘಾತದಲ್ಲಿ ಓರ್ವ ಮೃತಪಟ್ಟ ಘಟನೆ ಸುಳ್ಯದ ಪೈಚಾರು – ಸೋಣಂಗೇರಿ ರಸ್ತೆಯ ಆರ್ತಾಜೆಯಲ್ಲಿ ಸಂಭವಿಸಿದೆ.
ಐವರ್ನಾಡು ಗ್ರಾಮದ ಪಾಲೆಪ್ಪಾಡಿ ನಿವಾಸಿ, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉದ್ಯೋಗಿ ಭೋಜಪ್ಪ (50) ಮೃತರು.
ಸುಳ್ಯ ಕಡೆಯಿಂದ ಸೋಣಂಗೇರಿ ಕಡೆಗೆ ಸಂಚರಿಸುತ್ತಿದ್ದ ಬುಲೆಟ್ ಹಾಗೂ ಐವರ್ನಾಡಿನಿಂದ ಸುಳ್ಯ ಕಡೆಗೆ ಸಾಗುತ್ತಿದ್ದ ಭೋಜಪ್ಪ ಅವರ ಹೋಂಡ ಬೈಕ್ ನಡುವೆ ಡಿಕ್ಕಿಯಾಗಿದೆ.
ಬುಲೆಟ್ನಲ್ಲಿದ್ದ ನೆಲ್ಲೂರು ಕೆಮ್ರಾಜೆಯ ಮಂದ್ರಪ್ಪಾಡಿ ಅರುಣ್ ಹಾಗೂ ವಸಂತ ಅವರು ಗಾಯಗೊಂಡಿದ್ದು, ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಎರಡೂ ಬೈಕ್ಗಳು ಜಖಂಗೊಂಡಿದೆ.
ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.


























