ಮಂಗಳೂರು : ದೀಪಾವಳಿ ಹಬ್ಬದ ಸಂದರ್ಭ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯಶವಂತಪುರ – ಮಂಗಳೂರು ಜಂಕ್ಷನ್- ಯಶವಂತಪುರ ನಡುವೆ ವಿಶೇಷ ರೈಲು ಓಡಿಸಲು ನೈಋತ್ಯ ರೈಲ್ವೇ ನಿರ್ಧರಿಸಿದ್ದು, ಅ.30 ಮತ್ತು 31ರಂದು ಈ ರೈಲುಗಳು ಸಂಚರಿಸಲಿವೆ.
ನಂ.06565 ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ರೈಲು ಅ.30ರಂದು ರಾತ್ರಿ 11.50ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಅ.31ರಂದು ಮಧ್ಯಾಹ್ನ 11.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ನಂ.06566 ಮಂಗಳೂರು ಜಂಕ್ಷನ್ – ಯಶವಂತಪುರ ವಿಶೇಷ ರೈಲು ಅ.31ರಂದು ಮಧ್ಯಾಹ್ನ 1 ಗಂಟೆಗೆ ಮಂಗ ಳೂರು ಜಂಕ್ಷನ್ನಿಂದ ಹೊರಡಲಿದ್ದು, ರಾತ್ರಿ 9.45ಕ್ಕೆ ಬೆಂಗಳೂರು ತಲುಪಲಿದೆ.
ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ರೈಲು ಒಟ್ಟು 21 ಬೋಗಿ ಸಂಯೋಜನೆಯನ್ನು ಒಳಗೊಂಡಿದೆ.