ಉಡುಪಿ: ಮನೆ ಬಿಟ್ಟು ಬಂದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಣೆ ಮಾಡಿದ ಘಟನೆ ಮಲ್ಪೆ ಬೀಚ್‌ನಲ್ಲಿ ನಡೆದಿದೆ.
ರಕ್ಷಿಸಲಾದ ಮಕ್ಕಳು ಹಾವೇರಿಯವರು ಎಂದು ತಿಳಿದುಬಂದಿದೆ.
ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುವ ಆಸೆಯನ್ನು ಹೊಂದಿದ್ದರೂ ಪೋಷಕರ ಬೆಂಬಲವಿಲ್ಲದೆ ಅಸಹಾಯಕರಾಗಿದ್ದೇವೆ. ಹೀಗಾಗಿ ತಮ್ಮ ವಿದ್ಯಾಭ್ಯಾಸಕ್ಕೆ ಹಣ ಸಂಗ್ರಹಿಸುವ ಉದ್ದೇಶದಿಂದ ಹಾವೇರಿಯಿಂದ ಉಡುಪಿಗೆ ಬಂದಿದ್ದೇವೆ ಎಂದು ಬಾಲಕಿಯರು ತಿಳಿಸಿದ್ದಾರೆ.
ಬೀಚ್‌ನಲ್ಲಿ ಈ ಇಬ್ಬರು ಬಾಲಕಿಯರ ಚಲನವಲನಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಹೀಗಾಗಿ ಬೀಚ್ ಗಸ್ತು ಸಿಬ್ಬಂದಿ ಬಾಲಕಿಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಬಾಲಕಿಯರು ಮನೆ ಬಿಟ್ಟು ಬಂದಿರುವುದು ಬೆಳಕಿಗೆ ಬಂದಿದೆ.
ಒಳಕಾಡು ನಗರ ಮಹಿಳಾ ಪೊಲೀಸ್ ಠಾಣೆ ಪಿಎಸ್ ಐ ಪ್ರೇಮನ್ ಗೌಡ ಪಾಟೀಲ್ ಹಾಗೂ ಕಾನ್ಸ್ಟೇಬಲ್ ಮಹದೇವ್ ಬೀಚ್ ಗೆ ಆಗಮಿಸಿ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ರಕ್ಷಿಸಲ್ಪಟ್ಟ ಅಪ್ರಾಪ್ತರಿಗೆ ನಿಟ್ಟೂರು ಬಾಲಕಿಯರ ಆಶ್ರಯದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ರಕ್ಷಣಾ ಮತ್ತು ಪುನರ್ವಸತಿ ಪ್ರಕ್ರಿಯೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಮಹೇಶ್ ಹಾಜರಿದ್ದರು.