ಪುತ್ತೂರು : ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ವಿಧಿ ವಿಧಾನಗಳಾದ ನವದುರ್ಗಾ ಲೇಖನ ಯಜ್ಞ ಮತ್ತು ನವಚಂಡಿಕಾಯಾಗದ ಪುತ್ತೂರು ಸಂಚಾಲಕರ ಸಮಿತಿ ಸಭೆ ದರ್ಬೆಯಲ್ಲಿ ನಡೆಯಿತು.

ಜಿಲ್ಲಾ ಸಮಿತಿ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ ರವರು ನವದುರ್ಗಾ ಲೇಖನ ಯಜ್ಞದ ಮಾಹಿತಿ ನೀಡಿ ನೋಂದಾವಣೆ ಪುಸ್ತಕ ವಿತರಿಸಿದರು.

ಜಿಲ್ಲಾ ಸಮಿತಿ ಸಹಸಂಚಾಲಕರಾದ ಪುರುಷೋತ್ತಮ ಭಂಡಾರಿ, ಪ್ರದೀಪ್, ಕೃಷ್ಣ ಶೆಟ್ಟಿ, ಸಂತೋಷ್ ಶೆಟ್ಟಿ ಹಾಗೂ ಪುತ್ತೂರು ಸಮಿತಿ ಸದಸ್ಯರಾದ ರಾಧಾಕೃಷ್ಣ ರೈ ಬೂಡಿಯಾರು, ಜಯಂತ್ ನಡುಬೈಲು, ಮುರಳಿಕೃಷ್ಣ ಹಸಂತಡ್ಕ, ರತ್ನಾಕರ ರೈ ಕೆದಂಬಾಡಿಗುತ್ತು, ಉಮೇಶ್ ನಾಯಕ್ ಪುತ್ತೂರು, ಹರ್ಷಕುಮಾರ್ ರೈ ಮಾಡಾವು, ಸಂತೋಷ್ ಕುಮಾರ್ ರೈ ನಳೀಲು, ರಾಜೇಶ್ ಬನ್ನೂರು, ಸಹಜ್ ಜೆ. ರೈ ಬಳಜ್ಜ, ಮಹಿಳಾ ಸಮಿತಿಯ ಸದಸ್ಯರಾದ ದೀಕ್ಷಾ ಸಹಜ್ ರೈ, ಸ್ವರ್ಣಲತಾ ರೈ, ಹರಿಣಾಕ್ಷಿ ಜೆ.ಶೆಟ್ಟಿ, ವಿಶಾಲಾಕ್ಷಿ ವಿ. ಪೂಜಾರಿ, ಸರಿತಾ ಎ.ರೈ, ಮಾಲತಿ ರೈ, ಕೃಷ್ಣವೇಣಿ ಪ್ರಸಾದ್ ಮುಳಿಯ, ಶಾರದಾ ಅರಸ್, ರೇಣುಕಾ ಎಮ್. ರೈ, ಭಾರತಿ ರೈ ಅರಿಯಡ್ಕ, ಶ್ರೀಲತಾ ಶೆಣೈ ಉಪಸ್ಥಿತರಿದ್ದರು.

ಪುತ್ತೂರು ತಾಲುಕು ಸಮಿತಿ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿ, ವಂದಿಸಿದರು.





























