ಪುತ್ತೂರು : ನೂತನ ಸಂಸ್ಥೆ ಐಕಾನಿಕ್ ಟೈಲ್ ಗ್ಯಾಲರಿ ಕೇಪುಳು ಬಳಿಯಿರುವ ಶ್ರೀ ಗುರು ಆರ್ಕೇಡ್ ನಲ್ಲಿ ಅ.22 ರಂದು ಶುಭಾರಂಭಗೊಳ್ಳಲಿದೆ.
ಶ್ರೀ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶುಭಾಶೀರ್ವಾದ ನೀಡಲಿದ್ದಾರೆ.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಬನ್ನೂರು ಕ್ಯಾಥೋಲಿಕ್ ಸಭಾ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಿಲ್ಮಾ ಗೋನ್ಸಾಲ್ವೆಸ್, ಸಾಲ್ಮರ ಸಯ್ಯದ್ ಮಾಲೆ ಜುಮ್ಮಾಮಸ್ಜಿದ್ ಕತೀಬಾರರಾದ ಜನಾಬ್ ಪಿ.ಎಂ., ಉಮ್ಮರ್ ದಾರಿಮಿ, ಪುತ್ತೂರು ನಗರಸಭೆ ಪೌರಾಯುಕ್ತರಾದ ಮಧು ಎಸ್. ಮನೋಹರ, ದ್ವಾರಕ ಕನ್ಸ್ಟ್ರಕ್ಷನ್ ಮಾಲಕರಾದ ಗೋಪಾಲಕೃಷ್ಣ ಭಟ್, ಮಾಸ್ಟರ್ ಪ್ಲಾನರಿ ನಿರ್ದೇಶಕರಾದ ಅಕ್ಷಯ್ ಎಸ್.ಕೆ., ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕಾರ್ಯನಿರ್ವಾಹಕ ನಿರ್ದೇಶಕರಾದ ಅಕ್ಷಯ್ ಕೆ.ಸಿ., ನಿರ್ಮಾಣ್ ಅಸೋಸಿಯೇಟ್ಸ್ ಮಾಲಕರಾದ ಸಚ್ಚಿದಾನಂದ, ಶ್ರೀ ಗುರು ಆರ್ಕೇಡ್ ನ ಮಾಲಕರಾದ ಅರುಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.





























