ಬಾಯಲ್ಲಿ ನೀರೂರಿಸುವ ನಾನ್ ವೆಜ್ ಖಾದ್ಯಗಳಲ್ಲಿ ದೊನ್ನೆ ಬಿರಿಯಾನಿಯೂ ಒಂದು.. ಪುತ್ತೂರಿಗರು ದೊನ್ನೆ ಬಿರಿಯಾನಿ ತಿನ್ನೋದಕ್ಕೆ ಮಂಗಳೂರಿಗೋ ಅಥವಾ ಬೆಂಗಳೂರಿಗೋ ಅಥವಾ ಅಕ್ಕ-ಪಕ್ಕದ ಊರುಗಳಿಗೆ ಹೋಗ್ಬೇಕಿತ್ತು.. ಆದ್ರೇ ಇನ್ಮುಂದೆ ಆ ಟೆನ್ಶನ್ ಇರಲ್ಲ ಬಿಡಿ.. ನಮ್ಗೆ ದೊನ್ನೆ ಬಿರಿಯಾನಿ ತಿನ್ಬೇಕು ಅನ್ನಿಸಿದಾಗೆಲ್ಲ ಹೋಗಿ ತಿನ್ಕೊಂಡು ಬರ್ಬಹುದು..
ಹೌದು.. ಮುತ್ತಿನನಗರಿ ಪುತ್ತೂರಿನಲ್ಲಿ ಇನ್ನೇನು ಕೆಲ ದಿನಗಳಲ್ಲಿ ಬೆಂಗಳೂರಿನಲ್ಲಿ ಫೇಮಸ್ ಆಗಿರುವ ತೂಗುದೀಪ ದೊನ್ನೆ ಬಿರಿಯಾನಿ ಘಮ-ಘಮಿಸಲಿದೆ.
ಪುತ್ತೂರು-ದರ್ಬೆ ರಸ್ತೆಯ ರಿಲಯನ್ಸ್ ಡಿಜಿಟಲ್ ಸಮೀಪ ನ.4 ರಂದು ‘ಬೆಂಗಳೂರು ದೊನ್ನೆ ಬಿರಿಯಾನಿ’ ರೆಸ್ಟೋರೆಂಟ್ ಪ್ರಾರಂಭಗೊಳ್ಳಲಿದೆ.
ಫ್ಯಾಮಿಲಿ ರೆಸ್ಟೋರೆಂಟ್ ಇದಾಗಿದ್ದು, ಎಸಿ ಕ್ಯಾಬಿನ್ ಹಾಗೂ ನಾನ್ ಎಸಿ ಕ್ಯಾಬಿನ್ ಗಳನ್ನೂ ಒಳಗೊಂಡಿರಲಿದೆ.
ಕರಾವಳಿ ಶೈಲಿಯ ಬಾಳೆಎಲೆ ಮೀನೂಟದ ಜೊತೆಗೆ ಕರಾವಳಿ ಮೀನಿನ ಖಾದ್ಯಗಳು, ಚಿಕನ್ ಖಾದ್ಯಗಳು ಹಾಗೂ ತುಳುನಾಡಿನ ಸ್ಪೆಷಲ್ ಐಟಂಗಳು ದೊರೆಯಲಿದೆ.
ಅಷ್ಟೇ ಅಲ್ಲದೇ ಶವರ್ಮಾ, ಗ್ರಿಲ್, ಟಿಕ್ಕಾ, ಜ್ಯೂಸ್ ಹಾಗೂ ಇನ್ನಿತರ ಖಾದ್ಯಗಳು ದೊರಕಲಿದೆ.