ಸುಳ್ಯ : ಆಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ರಾಘವನ್ ಕೆದೀಶ್ವರನ್ ಆಲಿಯಾಸ್ ಕೋಳಿ ಕರಣ್ ಬಂಧಿತ.
ಕಳ್ಳತನ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ, ಸುಳ್ಯ ಪೊಲೀಸ್ ಠಾಣೆಗೆ ಬೇಕಾಗಿದ್ದ ರಾಘವನ್ ಕೆದೀಶ್ವರನ್ ನನ್ನು ಕೆಲವು ದಿನಗಳ ಹಿಂದೆ ಪೊಲೀಸರು ಬಂಧಿಸಿ ಕರೆ ತಂದ ಸಂದರ್ಭದಲ್ಲಿ ಆತ ಸುಳ್ಯದ ಆಸ್ಪತ್ರೆಯಿಂದ ಪರಾರಿಯಾಗಿದ್ದ.
ಪೊಲೀಸರು ಆರೋಪಿಯನ್ನು ತಮಿಳುನಾಡಿನ ಸತ್ಯಮಂಗಲ ಎಂಬಲ್ಲಿಂದ ಬಂಧಿಸಿದ್ದಾರೆ.