ಪುತ್ತೂರು : ಮಂಗಳೂರು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗದ ಪುತ್ತೂರು ಜಿಲ್ಲೆಯ ಉಪಾಧ್ಯಕ್ಷರಾಗಿ ಪೆರ್ನೆ ಕೇದಗೆ ಪ್ರತೀಶ್ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಸೃಜನ್ ರೈ ಪುತ್ತೂರು ಆಯ್ಕೆಯಾಗಿದ್ದಾರೆ.
ನೆಹರೂನಗರ ವಿವೇಕಾನಂದ ಪದವಿ ವಿದ್ಯಾರ್ಥಿಯಾದ ಪ್ರತೀಶ್ ಶೆಟ್ಟಿ ಪೆರ್ನೆ ಗ್ರಾಮದ ಕೇದಗೆ ದಿವಾಕರ ಶೆಟ್ಟಿ ಮತ್ತು ವಿಜಯ ಶೆಟ್ಟಿರವರ ಪುತ್ರ.
ದರ್ಬೆ ಫಿಲೋಮಿನಾ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಯಾದ ಸೃಜನ್ ರೈ ಕೆದಂಬಾಡಿ ಗ್ರಾಮದ ಬಾಲಯ ಮನೆ ಜಯರಾಮ್ ರೈ ಮತ್ತು ಪುಷ್ಪಲತಾ ಜೆ. ರೈ ರವರ ಪುತ್ರ.
ಇವರನ್ನು ವಿಜಯ ಸಾಮ್ರಾಟ್ ಪುತ್ತೂರು ಇದರ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ಪುತ್ತೂರಿನಲ್ಲಿ ಅಭಿನಂದಿಸಿದರು. ರಾಜೇಶ್ ಶೆಟ್ಟಿ ಮಠಂತಬೆಟ್ಟು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.