ಪುತ್ತೂರು : ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ಪುತ್ತೂರು – ಉಪ್ಪಿನಂಗಡಿ ರಸ್ತೆಯ ಸೇಡಿಯಾಪು ಎಂಬಲ್ಲಿ ಜೂ.14 ರಂದು ನಡೆದಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಪ್ರಭಾವದಿಂದಾಗಿ ಬೃಹತ್ ಗಾತ್ರದ ಗೋಳಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ ಎಂದು ತಿಳಿದು ಬಂದಿದೆ.ಫ್ರೆಂಡ್ಸ್ ಕ್ಲಬ್ ಸೇಡಿಯಾಪು ಸದಸ್ಯರು ಹಾಗೂ ಸ್ಥಳೀಯರಿಂದ ಮರ ತೆರವುಗೊಳಿಸುವ ಕಾರ್ಯವೂ ಭರದಿಂದ ಸಾಗುತ್ತಿದೆ.